ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ

ತಾಳಿಕೋಟೆ:ಜ.18: ಸ್ನೇಹಮಯಿ ಶಿಕ್ಷಕರ ಬಳಗ ತಾಳಿಕೋಟಿಯ ಕಾರ್ಯಕಾರಣ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರನ್ನಾಗಿ ಶ್ರೀಮತಿ ನೀಲಮ್ಮ ಬ. ಮೈಲೇಶ್ವರ, ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಯ. ಕುಲಕರ್ಣಿ, ಖಜಾಂಚಿಯಾಗಿ ಶ್ರೀ ಗಜಾನನ ಸೋನಾರ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀ ಸುರೇಶ ವಾಲಿಕಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

   ಇದೇ ಸಮಯದಲ್ಲಿ ಶಿಕ್ಷಕರುಗಳಾದ ಶ್ರೀಮತಿ ಶ್ರೀದೇವಿ ಯ.ಕುಲಕರ್ಣಿ, ಶ್ರೀಮತಿ ಸುಧಾ ಗು.ಸಕ್ಕರಿ, ಶ್ರೀಮತಿ ನೀಲಾಂಬಿಕ ಹ.ಏವೂರ, ಶ್ರೀಮತಿ ಮಹಾನಂದ ಸಿ. ಉಮರ್ಜಿ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಸ್ನೇಹಮಯಿ ಶಿಕ್ಷಕರ ಬಳಗದ ವತಿಯಿಂದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.