ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಕಲಬುರಗಿ,ಜ.5-ನಗರದ ಸ್ಟೇಷನ್ ಬಜಾರ್ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಯೋಜನೆ ಘಟಕದಡಿಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆಯ ಕಲಬುರಗಿ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಮಾತನಾಡಿ, ಮಹಿಳೆಯರಿಗೆ ತನ್ನ ಜೀವನವನ್ನು ಸರ್ವ ತ್ಯಾಗ ಮಾಡಿ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರಿಗೆ ಸಲ್ಲುತ್ತದೆ. ಶಿಕ್ಷಣದ ತರಬೇತಿ ಪಡೆದು ಮಹಿಳೆಯರಿಗೆ ಶಿಕ್ಷಣದ ತರಬೇತಿ ನೀಡಿ 18 ಪಾಠ ಶಾಲೆಗಳನ್ನು ಪ್ರಾರಂಭಿಸಿ ಭಾರತದ ಆಧುನಿಕ ಶಿಕ್ಷಣದ ತಾಯಿ ಅನಿಸಿಕೊಂಡಿದ್ದಾರೆ. ಜಾತಿ, ಲಿಂಗವನ್ನು ಮೀರಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಗುಣ ಕಲಿಸಿಕೊಟ್ಟ ಧೀಮಂತ ಮಹಿಳೆಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜಾತ ಬಿರಾದರ್ ಅವರು, ಜ್ಯೋತಿ ಬಾಯಿ ಫುಲೆಯವರು, ಜೀವನದಲ್ಲಿ ನೋವು ನಲಿವುಗಳನ್ನು ಅನುಭವಿಸಿ ಬೇರೆಯವರ ಬದುಕಿಗೆ ನಂದಾದೀಪವಾಗಿದ್ದಾರೆ. ಹೀಗಾಗಿ ಅವರನ್ನು ಶಿಕ್ಷಣದ ಅವ್ವಾ, ತಾಯಿ ಎಂದು ಕರೆಯುತ್ತೇವೆ ಎಂದರು. ವೇದಿಕೆ ಮೇಲೆ ಚಂದ್ರಕಾಂತ್ ಸನದಿ ,ಬಾಬು ಲೋಕು ಚೌಹಾಣ್ ಇದ್ದರು. ಸಾಂಸ್ಕøತಿಕ ಕಾರ್ಯದರ್ಶಿ ಮಾಪಣ್ಣ್ ಜಿರೊಳ್ಳಿ ನಿರ್ವಹಣೆ ಮಾಡಿದರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪಾಂಡು ಎಲ್ ರಾಠೋಡ್, ಉಪನ್ಯಾಸಕರಾದ ಬಲರಾಮ ಚೌವ್ಹಾಣ್, ಮಲ್ಲಯ್ಯ ಮಠಪತಿ ,ರೋಹಿಣಿ,ರೇಖಾ ರಾಯಚೂರು, ಶ್ರೀನಿವಾಸ್ ಐಜಿ ,ಶಶಿಧರ್ ಭೂಸನೂರ,ಸಿದ್ದಲಿಂಗಪ್ಪ ಪೂಜಾರಿ, ಶ್ರೀಶೈಲ್ ಖುರ್ದು, ರಾಜೇಶ್, ರವೀಂದ್ರ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂಸೇವಕರು ,ರೋವರ್ ವಿದ್ಯಾರ್ಥಿಗಳು ಹಾಜರಿದ್ದರು.