ಸಾವಿತ್ರಿಬಾಯಿ ಫುಲೆ ಅಕ್ಷರ ದಾಸೋಹಿ: ಶಶಿಕಲಾ ಟೆಂಗಳಿ

ಕಲಬುರಗಿ.ಜ.9:ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಆ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು. ಅವರ ತತ್ವಾದರ್ಶಗಳನ್ನು ಇಂದಿನ ಶಿಕ್ಷಕರು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಅವರು ಹೇಳಿದರು.
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಕರ್ನಾಟಕ ವಚನ ಸಾಹಿತ್ಯ ಅಕ್ಯಾಡೆಮಿ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಶನಿವಾರ ಏರ್ಪಡಿಸಿದ ಗುರು ಸಾವಿತ್ರಿ' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯವಾದರು ಎಂದರು. ಆದರ್ಶ ಶಿಕ್ಷಕ ಸಿದ್ಧಲಿಂಗ್ ಬಾಳಿ ಅವರು ಮಾತನಾಡಿ, ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು, ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ. ಹಾಗಾಗಿ, ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರವಾದುದು ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುವರ್ಣಾ ಹಣಮಂತರಾಯ್ ಮಲಾಜಿ ಜಿಲ್ಲೆಯ ಆದರ್ಶ ಶಿಕ್ಷಕರಿಗೆಗುರು ಸಾವಿತ್ರಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಿರ್ಗತಿಕರು, ಮಹಿಳೆಯರು ಮತ್ಗತು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ನಾನಾ ರೀತಿಯ ಮಾನಪಮಾನಗಳನ್ನು ಸಹಿಸಿ, ನಿಸ್ವಾರ್ಥ ಭಾವನೆಯಿಂದ, ಸಮರ್ಪಣಾಭಾವದಿಂದ ದುಡಿದ ತಾಯಿ ಸಾವಿತ್ರಿಬಾಯಿ ಫುಲೆ ಅವರು ದೇಶ ಕಂಡ ಅಪರೂಪದ ಶಿಕ್ಷಕಿಯಾಗಿದ್ದಾಳೆ. ಇಂಥ ತ್ಯಾಗಮಯಿಯ ಜೀವನ ಇಂದಿನ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಸಂಸ್ಥೆಯ ಪ್ರಿನ್ಸಿಪಾಲ್ ಬಸಂತಬಾಯಿ ಡಿ. ಅಕ್ಕಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಕ್ಯಾಡೆಮಿ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಅವರು ಮಾತನಾಡಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೀಂದ್ರಪ್ಪ ಗಣಮುಖಿ, ಅಕ್ಯಾಡೆಮಿಯ ಮಾ¯ತಿ ರೇಷ್ಮಿ, ಎಸ್.ಎಂ.ಪಟ್ಟಣಕರ್, ಶಕುಂತಲಾ ಪಾಟೀಲ್ ಜಾವಳಿ, ಎಂ.ಬಿ. ನಿಂಗಪ್ಪ, ರೇಣುಕಾ ಡಾಂಗೆ, ಪ್ರಭುಲಿಂಗ್ ಮೂಲಗೆ, ಶರಣಬಸವ ಜಂಗಿನಮಠ್, ಮಂಜುಳಾ ಪಾಟೀಲ್, ಪೂಜಾ ಆಲಗೂಡ್, ಬಿ.ಎಂ. ಪಾಟೀಲ್ ಕಲ್ಲೂರ್. ಜಗದೀರ್ಶ ಮರಪಳ್ಳಿ, ಸುನಿಲ್ ಹಡಪದ್, ಅಶೋಕ್ ಘೂಳಿ, ಮಂಗಲಾ ಕಪರೆ, ಬಿ.ಎಂ. ಪಾಟೀಲ್ ಕಲ್ಲೂರ್, ಕಲ್ಯಾಣಕುಮಾರ್ ಶೀಲವಂತ್, ಹೆಚ್.ಎಸ್. ಬರಗಾಲಿ, ವಿಶ್ವನಾಥ್ ತೊಟ್ನಳ್ಳಿ, ಶರಣಬಸಪ್ಪ ನರೋಣಿ, ಶಿವಾನಂದ್ ಮಠಪತಿ, ಶಿವರಾಜ್ ಕಾಳಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಾದ ಗಂಗಮ್ಮ ನಾಲವಾರ್, ಪ್ರಶಾಂತ್ ಕಂಬಾರ್, ಧನರಾಜ್ ಮಠಪತಿ, ಶ್ರೀಪಾಲ್ ಭೋಗಾರ್, ಅಮೃತ್ ದೊಡ್ಮನಿ, ಅನಿತಾ ಪರಮೇಶ್ವರ್, ಡಿ.ಎನ್. ಪಾಟೀಲ್, ಎಸ್.ಎಂ. ಡೋಮನಾಳ್, ಮಲ್ಲಮ್ಮ ಕಾಳಗಿ ಅವರಿಗೆ `ಗುರು ಸಾವಿತ್ರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.