ಸಾವಿತ್ರಿಬಾಯಿ ಫುಲೆರವರ 190ನೇ ಜಯಂತೋತ್ಸವ

ಸೇಡಂ,ಜ,04: ತಾಲೂಕಿನ ಊಡಗಿ ರಸ್ತೆಯ ಆದಿಜಾಂಬವ ಜನಸಂಘ ತಾಲೂಕು ಘಟಕದ ವತಿಯಿಂದ ಆಶ್ರಯ ಕಾಲೋನಿಯಲ್ಲಿ ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳೆಯರನ್ನು ಶಿಕ್ಷಣ ನೀಡಲು ಹೋರಾಡಿದ ಮಹಿಳಾ ಹೋರಾಟಗಾರ್ತಿ, ಹಾಗೂ ಅನಿಷ್ಟ ಪದ್ಧತಿ ಮೂಢನಂಬಿಕೆಯನ್ನು ತೊಡಗಿಸಿದ ಅಕ್ಷರ ಅವ್ವ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸರಳವಾಗಿ ಆಚರಿಸಿದರು. ಈ ಜಯಂತೋತ್ಸವದಲ್ಲಿ
ಆದಿಜಾಂಭವ ಜನ ಸಂಘದ
ತಾಲೂಕ ಅಧ್ಯಕ್ಷರಾದ ಜಗನ್ನಾಥ್ ಎಸ್ ಬಿಜನಳಿಕರ್ ,ಶ್ರೀ ಶಿವಶರಣ ಮಾದರ ಚೆನ್ನಯ್ಯ ಜನಜಾಗೃತಿ ವೇದಿಕೆ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕಾಳಗಿ ಕರ್, ಮತ್ತು ನವನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷರಾದ ಭೀಮಶಂಕರ್ ಕೊರವಿ, ಹನುಮಂತ ಭರತನೂರ್, ಚಂದ್ರು, ಮಕ್ಕಳು ಪಾಲ್ಗೊಂಡಿದ್ದರು.