ಸಾವಿತ್ರಿಬಾಯಿ ಫುಲೆಯವರ ಅಕ್ಷರ ಕ್ರಾಂತಿ ಸಾಮಾನ್ಯವಾದುದಲ್ಲ

ಕಲಬುರಗಿ:ಜ.4:ಅಕ್ಷರದಅವ್ವ, ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ ಅವರ 192 ನೆಯ ಜನ್ಮದಿನಾಚರಣೆಯನ್ನು ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ-ಮಾನವ ಬಂಧುತ್ವ ವೇದಿಕೆ ಕರ್ನಾಟಕ ಜಿಲ್ಲಾ ಘಟಕ ಸಹಯೋಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಡಾ. ಸಂಗಮೇಶ ಹಿರೇಮಠ ಅವರು ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತ ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿ ಸಾಮಾನ್ಯವಾದುದಲ್ಲ. ಅವರು ನಿಜವಾಗಿಯು ಮಹಾತ್ಮರು ಅವರ ಆದರ್ಶ ನಮಗೆ, ಸಮಾಜಕ್ಕೆ ಸದಾ ಆದರ್ಶವೆಂದು ತಿಳಿಸಿದರು. ವಿಶೇಷ ಉಪನ್ಯಾಸ ನೀಡಿದ ಡಾ . ಅನೀಲ ಟೆಂಗಳಿ ಅವರು ಸಾವಿತ್ರಿಬಾಯಿ ಫುಲೆ ಬದುಕಿನಹತ್ತಾರು ಘಟನೆಗಳನ್ನು ವಿವರಿಸುತ್ತ ವರ್ಣ – ವರ್ಗ, ವ್ಯವಸ್ಥೆಯ ಮಧ್ಯದಲ್ಲಿ ಹಿಂದುಳಿದ ವರ್ಗದಿಂದಬಂದ ಮಹಿಳೆಯೊಬ್ಬಳು ಎಂಥ ಕ್ರಾಂತಿ ಮಾಡಿದ್ದಾಳೆಂಬುದು ರೋಮಾಂಚನಕಾರಿ ವಿಷಯವಾಗಿದೆ . ಸಾಮಾನ್ಯ ಹೆಣ್ಣು ಮಕ್ಕಳು ಶಾಲೆ ಮುಖನೋಡದೆ ಇರುವ ಕಾಲದಲ್ಲಿ ತಾನು ಅಕ್ಷರ ಕಲಿತು, ಶಾಲೆಗೆ ಶಿಕ್ಷಕಿಯಾಗಿ, ಶೋಷಿತ ಹೆಣ್ಣುಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಿ, ಶಿಕ್ಷಣ ಕ್ರಾಂತಿ ಮಾಡಿರುವುದು ಅದ್ಭುತ ಕಾರ್ಯವೆಂದು ತಿಳಿಸಿದರು . ಅಧ್ಯಕ್ಷತೆ ವಹಿಸಿದ ಪ್ರಾದ್ಯಾಪಕ ಪ್ರೊ. ಸಂಜಯ ಮಾಕಲ್ ಅವರು ಮಾತನಾಡುತ್ತ ಸಾವಿತ್ರಿಬಾಯಿ ಫುಲೆ ಜ್ಯೋತಿಬಾ ಫುಲೆ ಈ ದಂಪತಿಗಳು ತಮ್ಮ ಜೀವದ ಹಂಗು ತೊರೆದು ಮೇಲ್ಜಾತಿಯವರು ನೀಡಿದ ಹಿಂಸೆ , ಅಪಮಾನವನ್ನು ಎದುರಿಸಿ ಸಮಾಜದಲ್ಲಿನ ಕಂದಾಚಾರಗಳಾದ ಬಾಲ್ಯವಿವಾಹ , ಸತಿಪದ್ಧತಿ , ವಿಧವಾ ವಿವಾಹ ಸಮಸ್ಯೆ, ಅಸಮಾನತೆ, ಮಡಿ-ಮೈಲಿಗೆ ಮುಂತಾದವುಗಳನ್ನು ಸರಿಪಡಿಸಲು ಶಿಕ್ಷಣದಿಂದ ಮಾತ್ರಸಾದ್ಯವೆಂದು ಅರಿತು ಶೂದ್ರಾದಿಶೂದ್ರ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು, ವಸತಿ ನಿಲಯಗಳನ್ನು ಸ್ಥಾಪಿಸಿ ಮಹತ್ಕಾರ್ಯ ಮಾಡುತ್ತಾರೆ . ಈ ಸಂಧರ್ಭದಲ್ಲಿ ಮೇಲ್ಜಾತಿಯವರು ನೀಡುವ ಹಿಂಸೆ , ಸಂಕಟ ಅಪಮಾನಗಳನ್ನು ಜೀವ ಬೆರಿಕೆ , ಸಮಾಜ ಬಹಿಸ್ಕಾರ, ಮಾಡಿದಾಗಲು ಫುಲೆದಂಪತಿಗಳು ಯಾವುದಕ್ಕು ಹೆದರುವುದಿಲ್ಲ ಅಕ್ಷರ ಕ್ರಾಂತಿಮಾಡಿ ತೋರಿಸುತ್ತಾರೆ. ಪುನೆ ಸುತ್ತಮುತ್ತ ಹತ್ತಾರು ಶಾಲೆಗಳನ್ನು ಹಾಗು ಅನಾಥ ಆಶ್ರಮಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆ ಮಾಡಿದ ಮಹಾತ್ಮರಾಗಿದ್ದಾರೆಂದು ತಿಳಿಸಿದರು. ಮುಖ್ಯ ಅತಿಥಿüಗಳಾದ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸ್ಮಿತಾ ಅವರು ಅಕ್ಷರ ಕ್ರಾಂತಿಗೆ ನಾಂದಿ ಹಾಡಿದವರು ಸಾವಿತ್ರಿ ಬಾಯಿ ಫುಲೆ ಕೊಡುಗೆ ಅನುಪಮವಾಗಿದೆ ಎಂದು ತಿಳಿಸಿದರು. ಆರಭದಲ್ಲಿ ಪ್ರಾಸ್ಥಾವಿಕ ಮಾತನಾಡಿದ ಡಾ. ಚಿ. ಸಿ. ನಿಂಗಣ್ಣ ಅವರು ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತ , ಮೇಲ್ವರ್ಗದ ಉಪಟಳದ ಮದ್ಯದಲ್ಲಿಯೂ ಶಿಕ್ಷಣದಲ್ಲಿ ಕ್ರಾಂತಿ ಮಾಡಿ, ಅಸಹಾಯಕರ ಬಾಳಿನಲ್ಲಿ ಬೆಳಕು ಮೂಡಿಸಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿನಿಯರು ಪ್ರಾರಂಭದಲ್ಲಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು, ಜಿಲ್ಲಾ ವೇದಿಕೆ ಸಂಚಾಲಕರಾದ ನಾಗೇಂದ್ರ ಜವಳಿ ಅವರು ಉಪಸ್ಥಿತರಿದ್ದರು . ವಿದ್ಯಾರ್ಥಿಗಳು , ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು , ಶ್ರವಣಕುಮಾರ ಮೊಸಲಗಿ ಕಾರ್ಯಕ್ರಮ ನಿರೂಪಿಸಿದರು . ಉಪನ್ಯಾಸಕಿ ನಾಗಮ್ಮ ಹೊಸಮನಿ ವಂದಿಸಿದರೆಂದು ಉಪ ಪ್ರಾಂಶುಪಾಲರು ತಿಳಿಸಿದ್ದಾರೆ.