ಸಾವಿತ್ರಿಬಾಯಿ ಪುಲೇ ಪರಿಚಯವಾಗಲು ಶತಮಾನ ಬೇಕಾಯಿತು

ವಾಡಿ:ಮಾ.25: ಮಹಿಳೆಯರ ಮುಕ್ತಿಗಾಗಿ ಎಲ್ಲ ಗಡಿಗಳನ್ನು ಮೀರಿ ಅವರನ್ನು ಅಕ್ಷರ ಜ್ಞಾನಕೊಟ್ಟ ಅಕ್ಷರದ ಅವ್ವ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ನಮಗೆ ಪರಿಚಯವಾಗಲು ಒಂದು ಶತಮಾನ ಬೇಕಾಯಿತು ಎಂದು ಸಾಮಾಜಿಕ ಹೋರಾಟಗಾರ್ತಿ ನ್ಯಾಯವಾದಿ ಅಶ್ವಿನಿ ಮದನಕರ್ ಹೇಳಿದರು.
ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಪಟ್ಟಣದ ಬಹಮನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ “ಭಾರತದಲ್ಲಿ ಮಹಿಳಾ ಶೈಕ್ಷಣಿಕ ಕ್ರಾಂತಿ” ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಶೈಕ್ಷಣಿಕ ಪ್ರಗತಿಗಾಗಿ ಅನುಭವಿಸಿದ ನೋವು, ಅಪಮಾನಗಳು, ತ್ಯಾಗ ಅವರಿಗಾಗಿ ಪಟ್ಟ ಶ್ರಮ ಮರೆಯುವಂತಿಲ್ಲ. ಜೊತೆಗೆ ಅವರಿಗೆ ಸಹಕಾರ ನೀಡಿದ ಶೇಖ ಫಾತಿಮಾ ಅವರ ಕಾರ್ಯ ಅವಿಸ್ಮರಣೀಯ. ಜಗತ್ತಿನಲ್ಲಿ ಮಹಿಳೆ ಹೊರತಾಗ ಎಲ್ಲಾ ಹೋರಾಟಗಳು ಅಪೂರ್ಣ ಮತ್ತು ಅರ್ಥಹೀನ ಆ ಹೋರಾಟ ಯಶಸ್ವಿಯಾಗಲಾರವು ಎಂದರು,
ಯುವ ಬರಹಗಾರ ಕಾಶಿನಾಥ ಹಿಂದಿನಕೇರಿ ಮಾತನಾಡಿ, ಧರ್ಮ ಗ್ರಂಥಗಳು ಹೇಳಿದ ಎಲ್ಲವನ್ನು ಸತ್ಯ ಎಂದು ನಂಬಿದ್ದಕ್ಕಾಗಿ ಮಹಿಳೆ ಸಾಮಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾಳೆ. ಅನ್ಯಾಯವನ್ನು ವಿರೋಧಿಸುವ ಮನೋಭಾವ ಇಂದಿನ ಯುವತಿಯರೂ ಬೆಳೆಸಿಕೊಳ್ಳಬೇಕೆ ಕೇಳದೇ ಯಾವುದನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ಹಕ್ಕಿಗಾಗಿ ಸಂವಿಧಾನಬದ್ಧ ಹೋರಾಟಕ್ಕೆ ಮುಂದಾಗಿ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ವಿಕ್ರಮ್ ನಿಂಬರ್ಗಾ ಮಾತನಾಡಿ, ದೇಹ ರಚನೆಯನ್ನು ಹೊರತುಪಡಿಸಿದರೆ, ಮಹಿಳೆ ಮತ್ತು ಪುರುಷರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹಾಗೂ ಮಹಿಳೆಯರು ಪುರುಷರಿಗಿಂತ ಯಾವ ವಿಷಯದಲ್ಲೂ ಕಡಿಮೆ ಇಲ್ಲ. ಆದರೆ ಅವರು ಮಾನಸಿಕ ಗುಲಾಮಗಿರಿ ಮತ್ತು ಕೀಳರಿಮೆಯಿಂದ ಹೊರಬರಬೇಕು ಎಂದು ಸಲಹೆ ನೀಡಲಾಯಿತು.

ಉಪನ್ಯಾಸಕಿ, ಸುನಿತಾ ಸೂರ್ಯವಂಶಿ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಮಾತಮಾಡಿದರು. ಸಿದ್ಧಯ್ಯಶಾಸ್ತ್ರೀ ನಂದೂರಮಠ, ಬಸವರಾಜ ಯಲಗಟ್ಟಿ, ವಸೀಮ ಅಹ್ಮದ್ ಖಾನ್ ಪರಿವರ್ತನಾ ಗೀತೆ ಹಾಡಿದರು. ಪ್ರಾಂಶುಪಾಲರಾದ ಆಯೆಶಾ ಬೇಗಂ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ರವಿಕುಮಾರ ಕೋಳಕೂರ, ಶೋಭಾ.ವಿ.ಎನ್, ಲಕ್ಷ್ಮೀ ರವಿಕುಮಾರ, ಉಪನ್ಯಾಸಕಿಯರಾದ ಶಶಿಕಲಾ, ರುಕ್ಸಾನಾ ಬೇಗಂ, ಸಂಗೀತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಯಾನಂದ ಖಜೂರಿ ನಿರೂಪಿಸಿದರು, ಚಂದ್ರು ಕರ್ಣಿಕ್ ವಂದಿಸಿದರು.