ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ

ರಾಯಚೂರು,ಜ.೦೪- ನಗರದ ಹಮ್‌ದರ್ದ್ ಪ್ರೌಢ ಶಾಲೆಯಲ್ಲಿ ಕೆನರಾ ಬ್ಯಾಂಕ್ ವಿವಿಧ ಶಾಖೆಗಳ ವಿಭಾಗ ರಾಯಚೂರು ಇವರುಗಳ ಸಹಯೋಗದಲ್ಲಿ ದಿ.೦೩.೦೧.೨೦೨೩ ರಂದು ಮಾತೆ ಸಾವಿತ್ರಿಬಾಯಿ ಪುಲೆಯವರ ಜನ್ಮದಿನಾಚರಣೆ ಅಂಗವಾಗಿ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಯಚೂರು ನಗರದ ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿದ್ಯಾಜ್ಯೋತಿ ಶಿಷ್ಯ ವೇತನ ನೀಡುವ ಕಾರ್ಯಕ್ರಮವನ್ನು ಮಾತೆ ಸಾವಿತ್ರಿಬಾಯಿ ಪುಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜ್ಞಾನ ದೀಪ ಬೆಳಗಿಸುತ್ತಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಭಯಕುಮಾರ ಭಾರತಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ ಪ್ರಾದೇಶಿಕ ಕಾರ್ಯಾಲಯ ರಾಯಚೂರುರವರು ವಿದ್ಯಾರ್ಥಿಗಳು ವಿದ್ಯಾರ್ಜನೆ ಸರಿಯಾಗಿ ಮಾಡಿ ಯಾವುದೇ ಕೀಳಿರಿಮೆ ಇಟ್ಟುಕೊಳ್ಳಬೇಡಿ ಎಂದು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶಿವಮೂರ್ತಿ ವಿಭಾಗೀಯ ಪ್ರಬಂಧಕರು ಕೆನರಾ ಬ್ಯಾಂಕ್ ರಾಯಚೂರು ಅವರು ಮಾತೆ ಸಾವಿತ್ರಿಬಾಯಿ ಪುಲೆಯವರ ಸಾಧನೆ ಬಗ್ಗೆ ತಿಳಿಸುತ್ತಾ, ಅವರ ಕಂಡ ಕನಸು ಮಹಿಳೆಯರಿಗೆ ಶಿಕ್ಷಣ ಅವಶ್ಯಕ. ಅದರಿಂದ ಸಂಸಾರ, ನಾಡು, ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗಿದೆ. ಅರಿತಿರುವ ಮಾತೆಯವರ ಭಾವನೆಗೆ ನಮ್ಮ ಕೆನರಾ ಬ್ಯಾಂಕ್ ನನಸು ಮಾಡಲು ನಿಮಗೆ ದಾರಿ ದೀಪವಾಗಲಿದೆ. ಹೆಣ್ಣು ಮಕ್ಕಳಿಗೆ ಶಿಷ್ಯವೇತನ ನೀಡಿ ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಆರ್ಥಿಕ ಸಬಲೀಕರಣ ಮಾಡುವಲ್ಲಿ ಸಹಾಯಮಾಡಲಿದೆ. ಅದರ ಸದುಪಯೋಗಮಾಡಿಕೊಳ್ಳಬೇಕು ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದು ನಿಮ್ಮನ್ನು ನಿದ್ರಾ ಸಮಯದಲ್ಲಿಯು ಸಹ ಎಚ್ಚರಿಸುವಂತಿರಬೇಕು ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರತಕುಮಾರ ಕಳಸಾ ಕಾರ್ಯದರ್ಶಿಗಳು ಹಮ್‌ದರ್ದ್ ಶಾಲಾ ವ್ಯವಸ್ಥಾಪಕ ಮಂಡಳಿ ರಾಯಚೂರುರವರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವದಲ್ಲಿ ಕೇವಲ ಅಧ್ಯಾಯನ ಕಡೆ ಗಮನವಿರಬೇಕು ಇದರಿಂದ ವಿಚಲಿತವಾಗಬಾರದು ಎಷ್ಟೇ ಕಷ್ಟ ಬಂದರು ಅದನ್ನು ಎದುರಿಸಿ ಪ್ರಯತ್ನಪಟ್ಟರೇ ತಾವುಗಳು ತಮ್ಮ ಗುರಿಯನ್ನು ಮುಟ್ಟತ್ತೀರಿ. ಅದರ ಪೂರಕವಾಗಿ ತಮ್ಮ ಏಳಿಗೆ ಬಯಸುವ ಬ್ಯಾಂಕ್ ಇಲಾಖೆಯು ಸಹ ಸಹಾಯಮಾಡಲು ಮುಂದಾಗಿವೆ.
ಇನ್ನು ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಮಾಡಲಿ ಎಂದು ಆಶಾ ಭಾವನೆಯನ್ನು ತಮ್ಮ ಅಧ್ಯಕ್ಷನುಡಿಯಲ್ಲಿ ವ್ಯಕ್ತಪಡಿಸಿದರು. ಸದರಿ ಕಾರ್ಯಕ್ರಮದಲ್ಲಿ ಹಮದರ್ದ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ಕಾಶಪ್ಪ ಬುದ್ಧಾ ವೆಂಕಟೇಶ ಪ್ರಭಾರಿ ಮುಖ್ಯಗುರುಗಳು, ಭರತವ್ಯಾಸ ಸೀನಿಯರ್ ಮ್ಯಾನೆಜರ್ ಕೆನರಾ ಬ್ಯಾಂಕ್, ಕುಲದೀಪ ಮ್ಯಾನೇಜರ್, ಶ್ರವಣ ಕುಮಾರ ಮ್ಯಾನೇಜರ್ ಕೆನರಾ ಬ್ಯಾಂಕ್ ತಿಮ್ಮಾಪೂರ ಪೇಟೆ ಶಾಖೆ ರಾಯಚೂರು ವಿವಿಧ ಶಾಲೆಯ ಬಂದಿರುವ ಶಿಕ್ಷಕರು ಪೋಷಕರು ಉಪಸ್ಥಿತರಿದ್ದರು. ನರ್ಮದಾ ಶಿಕ್ಷಕಿಯರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ರವೀಂದ್ರ ಸಿ. ಕುರಿ ಶಿಕ್ಷಕರು ಎಲ್ಲರಿಗೂ ವಂದಿಸಿದರು.