ಸಾವಿತ್ರಿಬಾಯಿ ಪುಲೆರವರ 190ನೇ ಜಯಂತೋತ್ಸವ

ಸೇಡಂ,ಜ,04: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳೆಯರನ್ನು ಶಿಕ್ಷಣ ನೀಡಲು ಹೋರಾಡಿದ ಮಹಿಳಾ ಹೋರಾಟಗಾರ್ತಿ, ಹಾಗೂ ಅನಿಷ್ಟ ಪದ್ಧತಿ ಮೂಢನಂಬಿಕೆಯನ್ನು ತೊಡಗಿಸಿದ ಅಕ್ಷರ ಅವ್ವ ಸಾವಿತ್ರಿಬಾಯಿ ಪುಲೆ ಅವರ 190ನೇ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸರಳವಾಗಿ ಆಚರಿಸಿದರು. ಈ ಜಯಂತೋತ್ಸವದಲ್ಲಿ
ಕಚೇರಿಯ ಅಧೀಕ್ಷಕರಾದ ಮಕ್ಬೂಲ್ ಸಾಬ್ ದಫೇದಾರ, ಅಂಬೇಡ್ಕರ್ ವಸತಿ ನಿಲಯದ ಮೇಲ್ವಿಚಾರಕರಾದ ರೇವಣಸಿದ್ಧಪ್ಪಾ ಹಾಗೂ ವೆಂಕಟಪ್ಪ ಇದ್ದರು.