ಸಾವಿತ್ರಿಬಾಯಿ ಪುಲೆಯವರ ಜೀವನ ಕುರಿತ ಚಲನಚಿತ್ರ ಬಿಡುಗಡೆ

ವಿಜಯಪುರ, ಆ.5-ಆ.7ರಂದು ನಗರದ ಅಮೀರ್ ಚಿತ್ರಮಂದಿರದಲ್ಲಿ ಅಕ್ಕರದ ಅವ್ವ ದೇಶದ ಮೊದಲ ಮಹಿಳಾ ಶಿಕ್ಷಕ ಸಾವಿತ್ರಿಬಾಯಿ ಪುಲೆಯವರ ಜೀವನ ಕುರಿತ ಚಲನಚಿತ್ರ ಬಿಡುಗಡೆ ಸಮಾರಂಭ ಜರುಗಲಿದೆ.

ಬಾನುವಾರ ಬೆಳಿಗ್ಗೆ8.30 ಗಂಟೆಗೆ ಸಿನಿಮಾ ಬಿಡುಗಡೆ ಹಾಗೂ ಪ್ರದರ್ಶನ ನಡೆಯಲಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಬಿ ಕೆ ತುಳಸಿಮಾಲಾ ಸಿನಿಮಾ ಬಿಡುಗಡೆಗೊಳಿಸಲಿದ್ದು, ಎಫ್‍ಎನ್‍ಸಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸುನೀತಾ ಚವ್ಹಾಣ, ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಸಮಾಜ ಸೇವಕಿ ಕಲ್ಪನಾ ಪಾಟೀಲ, ಡಿಡಿಪಿಐ ಶಿರಟ್ಟಿಮಠ ಸೇರಿದಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಎಲ್ಲ ಶಿಕ್ಷಕ ಬಂಧುಗಳು, ಗುರುಮಾತೆಯರು ಸಾರ್ವಜನಿಕರು ಚಲನಚಿತ್ರ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಲನಚಿತ್ರ ವೀಕ್ಷಿಸಬೇಕೆಂದು ಸಾವಿತ್ರಿಬಾಯಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಕ್ಕಬಾಯಿ ನಾಯಿಕ ಪ್ರಕಟಣೆ ತಿಳಿಸಿದ್ದಾರೆ.