ಸಾವಿತ್ರಿಬಾಯಿ ಅವರ ಜನ್ಮ ದಿನಾಚರಣೆ

ರಾಯಚೂರು, ಜ.೪- ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ರಾಯಚೂರುನಲ್ಲಿ ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನವನ್ನು ಆಚರಿಸಲಾಯಿತು.
ಸಾವಿತ್ರಿ ಬಾಯಿ ಪುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾಥಿ೯ನಿಯರಾದ ಅಮೀನಾ ಬೀಬಿ ಸುಶ್ಮಾ ಹಾಗೂ ಜಮುನಾ ಶ್ರೀಮತಿ ಸಾವಿತ್ರಿಬಾಯಿ ಪುಲೆಯವರ ಬಗ್ಗೆ ಮಾತನಾಡಿದರು.ಡಾ.ಸುಗುಣ ಬಸವರಾಜ ಸಹಪ್ರಾದ್ಯಾಪಕರು ಸಮಾಜದ ಕಟ್ಟ ಕಡೆಯ ಮಹಿಳೆಯು ವಲಬ್ಯ ವಾಹಿನಿ ಗೆ ಬಂದು ಎಲ್ಲಾ ರಂಗದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಮಹಿಳೆಯರು ಶಿಕ್ಷಣ ಪಡೆಯಲು ಕಾರಣೇಬೂತರೇ ಸಾವಿತ್ರಿ ಬಾಯಿ ಪುಲೆ ಎಂದು ವಿದ್ಯಾರ್ಥಿನಿಯರನ್ನುದ್ದೇಶಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ.ಪ್ರಸನ್ನಕುಮಾರ ಪ್ರಾಚಾರ್ಯರು ದೇಶದ ಪ್ರಥಮ ಶಿಕ್ಷಕಿಯಾದ ಸಾವಿತ್ರಿ ಪುಲೆಯ ಬಗ್ಗೆ ಮಾತನಾಡಿ ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಹಾಗೂ ದೇಶದ ಅಭಿವೃದ್ದಿ ಸಾದ್ಯ ಎಂದು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಐಕ್ಯೆಎಸ್ಸಿ ಸಂಯೋಜಕರಾದ ಡಾ.ಜೋತಿ.ಸಿ.ಕೆ ಸಂಸ್ಕೃತಿಕ ಸಂಯೋಜಕರಾದ ಶರಣಗೌಡ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ.ಸಂತೋಷಕುಮಾರ್ ಶ್ರೀಮತಿ. ರಶೀದಾ ಪರ್ವಿನ್ .ರಂಗನಾಥ ಬಿಲ್ಲಾರ.ಬಿ. ಸ್ವರೂಪರಾಣಿ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣಿಯನ್ನು ಡಾ.ಮಲ್ಲಯ್ಯ ಮುಖ್ಯಸ್ಥರು ಕನ್ನಡ ವಿಭಾಗ ಇವರು ನಿರ್ವಹಿಸಿದರು ಉಮಾದೇವಿ ಸಹಾಯಕ ಪ್ರಾದ್ಯಾಪಕರು ವಂದಿಸಿದರು.