ಸಾವಿಗೆ ಮುನ್ನ 8ಮಂದಿಯ ಬಾಳಿಗೆ ಬೆಳಕಾದ ಯುವಕ

ಬೆಂಗಳೂರು,ನ.15-ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ತಾನಿನ್ನು ಬದುಕುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಅಂಗಾಂಗಗಳನ್ನು ದಾನ ಮೂಡುವ ಮೂಲಕ ಎಂಟು ಮಂದಿಯ ಬಾಳಿಗೆ ದೀಪಾವಳಿಯ ಬೆಳಕು ನೀಡಿರುವ
ಘಟನೆ‌ ದೇವನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರದ ಮಂಡಿಬೆಲೆಯ ಶಿವರಾಜು(26) ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕನಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಶಿವರಾಜು ತಲೆಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಅವರನ್ನು ಕೋಡಿಗೆಹಳ್ಳಿಯ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎಂಟು ದಿನ ಚಿಕಿತ್ಸೆಗೆ ನೀಡಿದರೂ ಸ್ಪಂದಿಸಿದ ಶಿವರಾಜು ಬದುಕುವುದು ಅಸಾಧ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.
ಶಿವರಾಜು ತಂದೆ ಮುನಿರಾಜು ಮತ್ತು ತಾಯಿ ಮುನಿಲಕ್ಷ್ಮಿ ಅವರ ಅನುಮತಿ ಮೇರೆಗೆ ವೈದ್ಯರು ಅಂಗಾಂಗಳನ್ನು ಪಡೆದುಕೊಂಡಿದ್ದಾರೆ. ಶಿವರಾಜು ಅವರ ಅಂಗಾಂಗದಿಂದ ಎಂಟು ಜನರಿಗೆ ಸಹಾಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.