ಸಾವಾಜಿ ಮಟನ್

ಬೇಕಾಗುವ ಸಾಮಗ್ರಿಗಳು

*ಮಟನ್ – ೧/೨ ಕೆ.ಜಿ
*ಚೆಕ್ಕೆ – ೩
*ಲವಂಗ – ೩
*ಏಲಕ್ಕಿ – ೨
*ಕಪ್ಪು ಏಲಕ್ಕಿ -೧
*ಶಾಹಿ ಜೀರಿಗೆ – ೧/೨ ಟೀ ಸ್ಪೂನ್
*ಧನಿಯಾ – ೧ ಚಮZ
*ಕಾಳು ಮೆಣಸು – ೧ ಚಮಚ
*ಬ್ಯಾಡಗಿ ಮೆಣಸಿನಕಾಯಿ – ೬-೮
*ಪಲಾವ್ ಎಲೆ – ೨ ಎಲೆ
*ಗಸಗಸೆ – ೧ ಚಮಚ
*ಒಣಕೊಬ್ಬರಿ – ೧/೨ ಕಪ್ಪು
*ಈರುಳ್ಳಿ – ೩
*ಶುಂಠಿ, ಬೆಳ್ಳುಳ್ಳಿ, ಪೇಸ್ಟ್ – ೧ ಟೇಬಲ್ ಸ್ಪೂನ್
*ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – ೧೦೦ ಗ್ರಾಂ
  • ಕಲ್ಲು ಹೂ – ೧

ಮಾಡುವ ವಿಧಾನ :

ಪ್ಯಾನ್‌ಗೆ ಎಣ್ಣೆ ಹಾಕಿ. ಕಾದ ಮೇಲೆ ಈರುಳ್ಳಿ ಹಾಕಿ ಕೆಂಪಗಾಗುವರೆಗೂ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಪ್ಯಾನ್‌ಗೆ ಚಕ್ಕೆ, ಲವಂಗ, ಏಲಕ್ಕಿ , ಕಪ್ಪು ಏಲಕ್ಕಿ, ಶಾಹಿ ಜೀರಿಗೆ, ಧನಿಯಾ, ಕಾಳು ಮೆಣಸು, ಬ್ಯಾಡಗಿ ಮೆಣಸಿನಕಾಯಿ, ಬಿರಿಯಾನಿ ಎಲೆಯನ್ನು ಒಂದೊಂದಾಗಿ ಹಾಕಿ ಡ್ರೈ ರೋಸ್ಟ್ ಮಾಡಿ. ಗಸಗಸೆ, ಒಣಕೊಬ್ಬರಿ, ಕಲ್ಲು ಹೂ ಹಾಕಿ ಚೆನ್ನಾಗಿ ಹುರಿದು ಕೊಂಡು, ತಣ್ಣಗಾದ ನಂತರ ನುಣ್ಣಗೆ ರುಬ್ಬಿಡಿ. ಇದಕ್ಕೆ ಪ್ಯಾನ್‌ನಲ್ಲಿ ಫ್ರೈ ಮಾಡಿಟ್ಟಿರುವ ಈರುಳ್ಳಿಯನ್ನು ಹಾಕಿ ರುಬ್ಬಿ. ಕುಕ್ಕರ್‌ಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮಟನ್, ರುಬ್ಬಿಕೊಂಡಿರುವ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ೪ ಕಪ್ ನೀರು ಹಾಕಿ, ೪ ವಿಷಲ್ ಕೂಗಿಸಿದರೆ ಸಾವಾಜಿ ಮಟನ್ ರೆಡಿ.