ಸಾವಳಗಿ: ಮನೆ ಬೀಗ ಮುರಿದು 2.45 ಲಕ್ಷ ರೂ. ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜೂ.12-ಬೇಸಿಗೆಯ ಕಾರಣಕ್ಕೆ ಮನೆ ಮಾಳಿಗೆ ಮೇಲೆ ಮಲಗಿದ್ದಾಗ ಕಳ್ಳರು ಎರಡು ಮನೆಗಳ ಬೀಗ ಮುರಿದು 2,45,800 ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋದ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ರಾeಶೇಖರ ಸುಲ್ತಾನಪುರ ಎಂಬುವವರ ಮನೆ ಬೀಗ ಮುರಿದು 50 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಸುತ್ತುಂಗರ, 5 ಸಾವಿರ ರೂ.ಮೌಲ್ಯದ ಮೊಬೈಲ್, 20 ಸಾವಿರ ರೂ.ನಗದು ಸೇರಿ 1 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ.
ಇದೇ ಗ್ರಾಮದ ಬಸವರಾಜ ಸೋಮಾ ಎಂಬುವವರ ಮನೆ ಬೀಗ ಮುರಿದು 20 ಸಾವಿರ ರೂ.ಮೌಲ್ಯದ 4 ಗ್ರಾಂ.ಬಂಗಾರದ ಸುತ್ತುಂಗರ, 17,500 ರೂ.ಮೌಲ್ಯದ 3.5 ಗ್ರಾಂ.ಬಂಗಾರದ ಗುಂಡಿನ ಸರ, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕವಿಯೋಲೆ, 15 ಸಾವಿರ ರೂ.ಮೌಲ್ಯದ 3 ಗ್ರಾಂ.ಸುತ್ತುಂಗರ, 5 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 2100 ರೂ.ಮೌಲ್ಯದ ಬೆಳ್ಳಿ ಕಾಲುಚೈನ, 1200 ಮೌಲ್ಯದ ಬೆಳ್ಳಿ ಖಡೆ, 40 ಸಾವಿರ ರೂ.ನಗದು ಸೇರಿ 1,45,800 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.