ಸಾವಳಗಿ (ಬಿ) ಗ್ರಾಮದ ನೂತನ ಪಶುಚಿಕಿತ್ಸಾಲಯ ಕಟ್ಟಡ ಉದ್ಘಾಟನೆ

ಕಲಬುರಗಿ,ಜ.11:ಕಲಬುರಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ನೂತನ ಪಶುಚಿಕಿತ್ಸಾಲಯ ಕಟ್ಟಡವನ್ನು ಗೋಮಾತೆ ಪೂಜೆ ಮಾಡುವುದರೊಂದಿಗೆ ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾವಳಗಿ (ಬಿ)ಗ್ರಾಮ ಪಂಚಾಯತ ಅಧ್ಯಕ್ಷೆ ಜಯಶ್ರೀ ಸೂರ್ಯಕಾಂತ ಜಾನೆ, ಕಲಬುರಗಿ ಪಶು ಪಾಲನಾ ಇಲಾಖೆ (ಆಡಳಿತ) ಉಪನಿರ್ದೇಶಕ ಡಾ|| ಎಸ್.ಡಿ.ಅವಟಿ, ಕಲಬುರಗಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ|| ಎಸ್.ಕೆ.ಟಕ್ಕಳಕಿ, ಹಿರಿಯ ಪಶುವೈದ್ಯಾಧಿಕಾರಿ ಡಾ|| ನಿಂಗದಳ್ಳಿ ಶರಣಬಸಪ್ಪ, ಪಶುವೈದ್ಯ ಪರೀಕ್ಷಕ ರವಿಕುಮಾರ ಬಿ. ಮಾಡಿಯಾಳಕರ್, ಸಾವಳಗಿ (ಬಿ)ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ಸಾವಳಗಿ(ಬಿ) ಪಶು ಚಿಕಿತ್ಸಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.