ಮೈಸೂರು: ಮೇ.29:- ಸ್ವಾತಂತ್ರ ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರ 140ನೇ ಜಯಂತಿಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಆಚರಿಸಲಾಯಿತು.
ದೇಶದ ಸಾರ್ವಭೌಮತೆಯ ಸಂಕೇತವಾದ ನೂತನ ಸಂಸತ್ ಭವನದ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್ “ಸಾವರ್ಕರ್ ರವರಿಗೆ ಬ್ರಿಟಿಷರು 2 ಕರಿನೀರಿನ ಶಿಕ್ಷೆ ಕೊಟ್ಟರೂ ಕುಗ್ಗಲಿಲ್ಲ, ಆದರೆ ಬೇರೆ ಬೇರೆ ಕಾರಣಕ್ಕೆ ಸ್ವದೇಶೀಯ ಕೆಲವು ಮಂದಿ ಅವಮಾನಿಸುತ್ತಾ ಬಂದಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಸಾವರ್ಕರ್ ಜನ್ಮ ದಿನದಂದು ಸಂಸತ್ ಭವನ ಉದ್ಘಾಟಿಸುತ್ತಿರುವುದು ಅವರಿಗೆ ಸಂದ ಗೌರವವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ಹಿಂದೂಪರ ಸಂಘಟನೆಗಳ ಮುಖಂಡರಾದ ಮೈ.ಕಾ.ಪ್ರೇಮ್ ಕುಮಾರ್, ಸಂಜಯ್, ಮಧು ಸೋಮಣ್ಣ, ರಾ. ಪರಮೇಶ್ ಗೌಡ, ಉಪಾಧ್ಯಕ್ಷ ಸಂದೇಶ ಪವಾರ್, ಕಾರ್ಯದರ್ಶಿ ಎನ್.ದೀಪಕ್, ಸದಸ್ಯರಾದ ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಟಿ.ಪಿ.ಮಧುಸೂಧನ್, ಟಿ.ಎಸ್.ಅರುಣ್, ಶಶಿಕಾಂತ್, ಪ್ರತಾಪ್, ಉಮೇಶ್, ಹರೀಶ್ ಗೌಡ, ಸುರೇಂದ್ರ, ವಿಜ್ಞೇಶ್ವರ ಭಟ್, ಶಿವರಾಜ್, ಶರ್ಮಣ್, ಪ್ರಶಾಂತ್ ಭಾರದ್ವಾಜ್, ಸಚಿನ್, ಧರ್ಮೇಂದ್ರ, ಶಿವಲಿಂಗಪ್ಪ, ನಂದಕುಮಾರ್, ಮೋಹಿತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.