ಸಾವಯುವ ಬೇಸಾಯದಿಂದ ಪರಿಸರ ಸಂರಕ್ಷಣೆ

ಕಲಬುರಗಿ:ಜೂ.6: ವ್ಯವಸಾಯದಲ್ಲಿ ರಸಗೊಬ್ಬರ ಮತ್ತು ಕ್ರಿಮಿ-ಕೀಟನಾಶಕಗಳ ಬಳಕೆಯಿಂದ ಮಣ್ಣು, ಪರಿಸರ ಮಾಲಿನ್ಯವಾಗಿದೆ. ಇದರಿಂದ ಪ್ರಸ್ತುತ ದಿನಗಳಲ್ಲಿ ನಾವು ಸೇವಿಸುವ ಆಹಾರ, ನೀರು ರಸಾಯನಿಕಯುಕ್ತವಾಗಿದ್ದು, ಇದು ದೇಹದ ಮೇಲೆ ನೆರವಾದ ದುಷ್ಪರಿಣಾಮವನ್ನು ಬಿರುವ ಮೂಲಕ ಜೀವಿತಾವಧಿಯನ್ನು ಕಡಿಮೆಗೊಳಿಸಿದೆ. ಆದ್ದರಿಂದ ರಾಸಾಯನಿಕ ಮತ್ತು ಮಾಲಿನ್ಯಮುಕ್ತ, ಪರಿಸರ ಸ್ನೇಹಿಯಾಗಿರುವ ಸಾವಯುವ ಬೇಸಾಯದಿಂದ ಪರಿಸರ ಸಂರಕ್ಷಣೆÀ ಸಾಧ್ಯವಾಗುತ್ತದೆಯೆಂದು ಕೃಷಿ ಪಂಡಿತ ಪ್ರಶಸ್ತಿ ಪುರಷ್ಕøತ ಪ್ರಗತಿಪರ ರೈತ ಗುಂಡೇರಾಯ ಎಸ್.ಧೂಳಗೊಂಡ ಅಭಿಮತ ವ್ಯಕ್ತಪಡಿಸಿದರು.

      ನಗರದ ಸಮೀಪದ ಆಳಂದ ರಸ್ತೆಯಲ್ಲಿರುವ ಪಟ್ಟಣ ಕ್ರಾಸ್‍ನಲ್ಲಿರುವ ತಮ್ಮದೇ ಆದ 'ಗಗನ ಸಾವಯುವ ಕಬ್ಬಿನ ಹಾಲಿನ ಕೇಂದ್ರ'ದಲ್ಲಿ ಸಾವಯುವ ಬೇಸಾಯದಿಂದ ಉತ್ತಮ ಸಾಧನೆ ಮಾಡಿ ಪರಿಸರಸ್ನೇಹಿ ವಾತವರಣ ನಿರ್ಮಾಣಕ್ಕೆ ಶ್ರಮಿಸುತ್ತಿರುವ ತಮಗೆ 'ಬಸವೇಶ್ವರ ಸಮಾಜ ಸೇವಾ ಬಳಗ'ದಿಂದ 'ವಿಶ್ವ ಪರಿಸರ ದಿನಾಚರಣೆ' ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

   ಸಾವಯುವಕ್ಕೆ ಮೊರೆಹೋದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ. ಪ್ರತಿಯೊಬ್ಬರು ಸಾವಯುವ ಆಹಾರವನ್ನೇ ಸೇವಿಸಬೇಕು. ಸಾವಯುವ ಕಬ್ಬಿನ ಹಾಲನ್ನು ಸೇವಿಸುವದರಿಂದ ಕಾಮಾಲೆ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಮೂತ್ರ ವಿಸರ್ಜನೆಯಲ್ಲಿ ಉರಿಯೂತ, ಸ್ತನ ಕ್ಯಾನ್ಸರ್ ನಿಯಂತಣವಾಗುತ್ತದೆ. ಗಂಟಲು,ಕೆಮ್ಮು, ನೆಗಡಿ, ಜ್ವರಕ್ಕೆ ಇದು ರಾಮಬಾಣವಾಗಿದೆ. ಪೋಷಕಾಂಶಗಳ ಆಗಾರ, ಸುಗಮ ಗರ್ಭದಾರಣೆ, ಉಸಿರಿನ ದುರ್ವಾಸನೆ ನಿಯಂತ್ರಣ, ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯಕ, ಜೀವಕ್ರಿಯೆ ನಿಯಮಿತ ಚಲನೆ, ಸುಗಮ ಗರ್ಭದಾರಣೆ, ದೇಹದ ಉಷ್ಣಾಂಶ ನಿಯಂತ್ರಣ, ಲೀವರ್‍ನ ಕಾರ್ಯ ಉತ್ತಮಗೊಳಿಸುವಿಕೆ, ಮೂಗಿನಲ್ಲಿ ರಕ್ತಸ್ರಾವವಾಗುವುದನ್ನು ನಿಯಂತ್ರಣದಂತಹ ಅನೇಕ ಗುಣಗಳು ಸಾವಯುವ ಕಬ್ಬಿನ ಹಾಲನ್ನು ಹೊಂದಿರುವದರಿಂದ ಆಗಾಗ್ಗೆ ಸೇವಿಸುವುದು ಅಗತ್ಯವಾಗಿದೆಯೆಂದು ಹೇಳಿದರು.

 ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ಡಾ.ಪುರಷೋತ್ತಮ ದೇಶಮುಖ, ಬಾಬು ಪಟ್ಟಣ, ಬಾಬು ದಣ್ಣೂರ, ಕೇದರನಾಥ ಕುಲಕರ್ಣಿ ಇದ್ದರು.