ಸಾವಯವ ನ್ಯಾನೋ ಗೊಬ್ಬರ ಬಳಕೆ ಹೆಚ್ಚಿಸಿ-ಬಳ್ಳಾರಿ

ಬ್ಯಾಡಗಿ,ಏ8: ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.

ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಕೃಷಿ ಯಂತ್ರೋಪರಣ ಬಾಡಿಗೆ ಆಧಾರಿತ ಸೇವಾ ಕೇಂದ್ರ, ಫಾರ್ಮ್ ಮೇಶನರಿ ಬ್ಯಾಂಕ್ ಮತ್ತು ಮಣ್ಣು ಸಂರಕ್ಷಣಾ ಕೇಂದ್ರದ ಉದ್ಘಾಟನೆ ಹಾಗೂ ರೈತ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್ ವಿತರಣೆ ಮಾಡಿ ಮಾತನಾಡಿದ ಅವರು, ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ ನ್ಯಾನೋ ತಂತ್ರಜ್ಞಾನದ ಬೆಳೆ ಪೆÇೀಷಕಾಂಶ ನಿರ್ವಹಣೆ ಮತ್ತು ನ್ಯಾನೋ ಗೊಬ್ಬರಗಳಂತಹ ಉಪಕ್ರಮಗಳನ್ನು ಇಫೆÇ್ಕೀ ಅಭಿವೃದ್ಧಿಪಡಿಸಿದೆ. ಪ್ರತಿಯೊಬ್ಬ ರೈತರು ಸಾವಯವ ಬೆಳೆಗಳನ್ನು ಬೆಳೆಯುವ ಮೂಲಕ ಸದೃಡ ಹಾಗೂ ಗುಣಮಟ್ಟದ ಆಹಾರವನ್ನು ಸೇವಿಸಲು ಮುಂದಾಗಬೇಕಿದೆ. ರೈತರು ಈ ನಿಟ್ಟಿನಲ್ಲಿ ಕ್ರಮ ವಹಿಸುವ ಮೂಲಕ ರಾಸಾಯನಿಕ ಗೊಬ್ಬರದ ಬಳಕೆಗೆ ಕಡಿವಾಣ ಹಾಕಬೇಕಾಗಿರುವುದು ಅಗತ್ಯವೆಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ರೈತರು ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಮಣ್ಣಿನ ಆರೋಗ್ಯ ಕಾರ್ಡ್ ಮುಖಾಂತರ ಯಾವ ಭೂಮಿಗೆ ಯಾವ ಪೆÇೀಷಕಾಂಶದ ಅವಶ್ಯಕತೆ ಇದೆ ಎಂಬುದನ್ನು ಪತ್ತೆ ಮಾಡಿ, ರಸ ಗೊಬ್ಬರಗಳನ್ನು ಬಳಕೆ ಮಾಡಬೇಕು. ಇದರಿಂದ ಅನವಶ್ಯಕವಾಗಿ ಬಳಸುವ ರಾಸಾಯನಿಕ ರಸಗೊಬ್ಬರಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ.ಜಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ನಾಗರಾಜ ಉಜ್ಜನಿ ವಹಿಸಿದ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾಪಂ ಸದಸ್ಯ ಗುಡ್ಡಪ್ಪ ಕೋಳೂರ, ಶಂಕ್ರಪ್ಪ ಮಾತನವರ, ಸುರೇಶ ಯತ್ನಳ್ಳಿ, ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ, ಕೃಷಿ ಅಧಿಕಾರಿಗಳಾದ ಮಂಜುನಾಥ, ನಾಗರಾಜ, ಕೃಷಿ ಸಹಾಯಕರಾದ ಎಸ್. ಪಿ. ಮರಬಸಣ್ಣನವರ, ಕೆ.ಬಿ. ಹಿರೇಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಂತ್ರಿಕ ಕೃಷಿ ಸಹಾಯಕ ಬಸವರಾಜ ಮರಗಣ್ಣನವರ ಸ್ವಾಗತಿಸಿದರು. ಆತ್ಮಾ ಯೋಜನೆಯ ಸಂಯೋಜಕ ಚಂದ್ರಶೇಖರ ವಂದಿಸಿದರು.