ಸಾವಯವ ಕೃಷಿ ತರಬೇತಿ ಕಾರ್ಯಾಗಾರ

ಬೀದರ್ :ಎ.12:ತಾಲೂಕಿನ ಆಣದೂರ ಗ್ರಾಮದ ಭವಾನಿ ಮಂದಿರದಲ್ಲಿ ಅನ್ನದಾತ ಸ್ವಸಹಾಯ ಸಂಘದ ವತಿಯಿಂದ ರೈತರಿಗಾಗಿ ಒಂದು ದಿನದ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ತಜ್ಞರಾದ ಶ್ರೀ ಬಿ.ಎಸ್.ಕುದರೆ ಮಾಡಿದರು. ಅವರು ಸ್ವ ಸಹಾಯ ಸಂಘಗಳ ಉದ್ದೇಶ ಕೇವಲ ಆರ್ಥಿಕ ಸಶಕ್ತಿಕರಣವಲ್ಲ. ಜೊತೆಗೆ ಸಂಘದ ಸದಸ್ಯರಲ್ಲಿ ಪರಸ್ಪರ ಸಹಕಾರ, ವಿಶ್ವಾಸ ಮೂಡಿಸುವುದು.

ಆಣದೂರಿನ ಅನ್ನದಾತ ಸ್ವಸಹಾಯ ಸಂಘ ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಕಾಳಜಿಗೆ ಪೂರಕವಾಗಿ ರೈತರಿಗಾಗಿ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಮೆಚ್ಚುವ ಕೆಲಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀ ಸುನಿಲಕುಮಾರ್ ಎನ್. ಎಂ. ಅವರು ಕೃಷಿ ಕಾರ್ಯದಲ್ಲಿಉಳಿದ ತ್ಯಾಜ್ಯ ವಸ್ತುಗಳನ್ನು ಸುಡದೆ ಮರು ಉಪಯೋಗ ಮಾಡುವುದು ಸಾವಯವ ಕೃಷಿಯ. ಭಾಗವಾಗಿದೆ. ಈ ಸಂದರ್ಭದಲ್ಲಿ ಎರೆ ಹುಳು ಮೂಲಕ ಜೈವಿಕ ಗೊಬ್ಬರ ಸಿದ್ಧವಾಗುವ ರೀತಿ ತಿಳಿಸಿಕೊಟ್ಟರು. ಒಟ್ಟಾರೆ ಸಾವಯವ ಕೃಷಿಯಲ್ಲಿ ಎರೆ ಹುಳು ಗೊಬ್ಬರದ ಪೌಷ್ಟಿಕರಣದ ಕುರಿತು ರೈತರಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಾಗಾರದ ದಿವ್ಯ ಸಾನಿಧ್ಯ ವಹಿಸಿದ್ದ ತಡೊಳಾದ ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು ಸಾವಯವ ಕೃಷಿ ಪದ್ಧತಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ಭೂಮಿಯನ್ನು ರೈತರು ದೈವ ಸ್ವರೂಪಿ ಎಂದೂ ಪೂಜಿಸುತ್ತಾರೆ. ಕೃಷಿ ಮಾಡುವುದರಿಂದ ದುರ್ಭಿಕ್ಷೆ ಬರುವುದಿಲ್ಲ. ರೈತ ದೇಶದ ಬೆನ್ನೆಲುಬು. ರೈತನು ಸಂಶೋಧನಾಶೀಲನಾಗಿರಬೇಕು. ಲಾಭದಾಯಕ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸಶಕ್ತನಾಗಬೇಕು. ರೈತರಿಗೆ ಸರಿ ಸುಮಾರು 20 ಕ್ಕೂ ಹೆಚ್ಚೂ ಪ್ರಯೋಗಗಳನ್ನು ಸಾವಯವ ಕೃಷಿ ಅಳವಡಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತ ಸಾಧಕರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಾಗಾರದಲ್ಲಿ ಸಾವಯವ ಕೃಷಿಕ ಶ್ರೀ ಮಹದೇವಪ್ಪ ನಾಗೂರೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶ್ರೀನಿವಾಸರೆಡ್ಡಿ ನರಸಾರೆಡ್ಡಿ, ಗ್ರಾಮದ ಪ್ರಮುಖರಾದ ಶ್ರೀ ವೀರಂತಯ್ಯ ಹೀರೆಮಠ್, ಮಾಣಿಕರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಖಾಸಿಂ ಅಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನದಾತ ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀ ವಸಂತರೆಡ್ಡಿ ತಿಪ್ಪಾರೆಡ್ಡಿ ವಹಿಸಿದ್ದರು. ಅನ್ನದಾತ ಸ್ವಸಹಾಯ ಸಂಘದ ಸದಸ್ಯರಾದ ಶ್ರೀ ಗುಣವಂತ ಅತಿವಾಳೆ, ರಾಜಕುಮಾರ್ ತಡಗುರೆ, ಶಿವಶಂಕರ್ ಕಾಡವಾದೆ, ಭಗವಂತರೆಡ್ಡಿ, ಗಣಪತಿ ಮಡಿವಾಳ, ಲಕ್ಮಿಕಾಂತ ಕುಲಕರ್ಣಿ, ಚನ್ನಪಯ್ಯಾ ಕೋಟೆ ಸಹ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಅನ್ನದಾತ ಸ್ವಸಹಾಯ ಸಂಘದ ಶ್ರೀ ಬಸವರಾಜ ಬಶೆಟ್ಟಿ, ಸ್ವಾಗತವನ್ನು ಶ್ರೀ ಶಿವಕುಮಾರ ಹೀರೆಮಠ್, ವಂದನಾರ್ಪಣೆಯನ್ನು ಪ್ರಭುಷೆಟ್ಟಿ ಪಸರ್ಗಿ ನೆರವೇರಿಸಿದರು.