ಸಾವಯವ ಕೃಷಿ ಜಾಗೃತಿ ಅಗತ್ಯ

ಕೊಟ್ಟೂರು ನ 09 : ದೇಶೀಯ ಗೋವುಗಳನ್ನು ಸರಿಯಾದ ಕ್ರಮದಲ್ಲಿಸಾಕುವುದರಿಂದ ಕೃಷಿಕರ ಎಲ್ಲಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಆನಂದ ಹೇಳಿದರು.
ತಾಲೂಕಿನ ಹ್ಯಾಳ್ಯಾ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸಾವಯವ ಕೃಷಿ ಪರಿವಾರ ಉಧ್ಘಾಟಿಸಿ ಮಾತನಾಡಿದರು.
ಇಂದು ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಅಪಾಯಕಾರಿ. ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ವೃಷಬೇಂದ್ರ, ರವೀಂದ್ರಇದ್ದರು
ರೈತರು ಸದಸ್ಯತ್ವ ಹೊಂದಲು ರಾಂಪುರದ ಕೊಟ್ರೇಶ ಇವರನ್ನು ಸಂಪರ್ಕಿಸಿರಿ .8105418558