
ಕೋಲಾರ,ಮೇ ೨೧-ಕೋಲಾರ ತಾಲೂಕು ವೇಮಗಲ್ ಹೋಬಳಿ ಮೇಡಿಹಾಳ ಗ್ರಾಮದಲ್ಲಿ ಕರ್ನಾಟಕ ಸಂಘರ್ಷ ಸಮಿತಿ ಭೀಮವಾದ ಮತ್ತು ವಿಮೋಚನ ಮಹಿಳಾ ಹಕ್ಕುಗಳ ವೇದಿಕೆ ಅಂದ್ರಹಳ್ಳಿ ಕುಟೀರ ಇವರ ಸಹಯೋಗದಲ್ಲಿ ಅತಿಯಾದ ವಿಷಪೂರಿತ ರಾಸಾಯನಿಕ ಗೊಬ್ಬರಗಳ ಬಳಕೆ, ಕ್ರಿಮಿನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಸಾವಯವ ಕೃಷಿ ಪದ್ಧತಿಯಿಂದ ಆಗುವ ಪ್ರಯೋಜನಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಚಂದ್ರಶೇಖರ್ ಮಾತನಾಡಿ, ರೈತರು ವಿಷಪೂರಿತ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಮತ್ತು ಅತಿಯಾದ ರಾಸಾಯನಿಕ ಕೀಟನಾಶಗಳನ್ನು ಬಳಸುವುದರಿಂದ ರೈತರು ಬೆಳೆಯುವ ಹಣ್ಣು ತರಕಾರಿ ರಾಗಿ ಭತ್ತ ಎಲ್ಲವೂ ವಿಷ ಪೂರಿತವಾಗುತ್ತಿದೆ ಮತ್ತೆ ಭೂಮಿ ತಾಯಿಗೂ ಸಹ ವಿಷಕಾರಿಯಾಗಿ ಪರಿವರ್ತನೆಯಾಗುತ್ತಿದೆ. ಆದುದರಿಂದ ಊರಿನ ಎಲ್ಲಾ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಇಳುವರಿಯ ಜೊತೆಗೆ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ ಮತ್ತು ಇಂತಹ ಹಣ್ಣು ತರಕಾರಿ ತಿನ್ನುವುದರಿಂದ ಒಳ್ಳೆಯ ಆರೋಗ್ಯ ಸಹಿತ ಲಭಿಸುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಂದ್ರಳ್ಳಿ ಕೋಟಿರದ ವಿನೋದ, ಚನ್ನಪ್ಪನಹಳ್ಳಿ ನಾಗರಾಜ್, ಬೆಟ್ಟ ಹೊಸಪುರ ರವಿ, ಮೇಡಿಹಾಳ ಚೇರ್ಮನ್ ಗೋಪಾಲಪ್ಪ, ಆಂಜಿನಪ್ಪ, ಮಹೇಶ್, ಚನ್ನಕೇಶವ, ಸಂಜೀವಪ್ಪ, ಮುನಿಸ್ವಾಮಪ್ಪ, ನಾರಾಯಣಪ್ಪ, ನಾರಾಯಣಮ್ಮ, ಚಿನ್ನಯಮ್ಮ, ವಿನೋದಮ್ಮ, ಮುನಿಯಮ್ಮ, ರೂಪ, ಪಾರ್ವತಮ್ಮ, ಮುನಿಹನುಮಕ್ಕ ಇನ್ನು ಅನೇಕರು ಉಪಸ್ಥಿತರಿದ್ದರು.