
ಆಲಮೇಲ: ಆ.26:ಆಹಾರ ಉತ್ಪನ್ನಗಳ ಬೆಳೆಗಳು ಕಡಿಮೆಮಾಡಿ ಕಮರ್ಶಿಯಲ್ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಲಿದೆ. ಸಾವಯವ ಕೃಷಿಯೊಂದಿಗೆ ಮಿಶ್ರ ಬೆಳೆ ಬೆಳೆಯುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿ, ಕಂಪನಿಗಳು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಹೂವಿನಹಳ್ಳಿ ಗ್ರಾಮದ ಸರಕಾರಿ ಶಾಲೆ ದತ್ತು ಪಡೆದ ಕೋರಮಂಡಲ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಕಂಪನಿವತಿಯಿಂದ ಶಾಲಾ ಮಕ್ಕಳಿಗೆ ನೀರು ಶುದ್ಧೀಕರಣ ಘಟಕ ಹಾಗೂ ರೈತರಿಗೆ ಕೃಷಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಶಿಕ್ಷಣದಿಂದ ಹಿಡಿದು ರೈತರು ಬೆಳೆಯುವ ಬೆಳೆ ಸೇರಿದಂತೆ ಸಂಘ ಸಂಸ್ಥೆಗಳು ಎಲ್ಲವು ವ್ಯಾಪಾರಿಕರಣವಾಗುತ್ತಿದ್ದು ಯಾವುದು ಸಮಾಜಿಮುಖಿ ಅಭಿವೃದ್ದಿಗೊಳಿಸುವ ಚಿಂತನೆಗಳಾಗಿ ಉಳಿದುಕೊಂಡಿಲ್ಲ. ರೈತರು ಕಬ್ಬಿನ ಬೆಳೆ ಲಾಭದಾಯಕವೆಂದು, ಅದನ್ನೆ ಹೆಚ್ಚು ಅವಲಂಬಿಸಿದ್ದಾರೆ ಆದ್ದರಿಂದ ರೈತರಿಗೆ ಯಾವುದೆ ಲಾಭದಾಯಕವಿಲ್ಲ, ಮಿಶ್ರ ಬೆಳೆ ಬೆಳೆಯುವುದರಿಂದ ರೈತರು ಸಮೃದ್ದಿ ಜೊತೆಗೆ ಭೂಮಿಯ ಫಲವತ್ತತೆ ಕಾಪಾಡಿಕೊಂಡಂತಾಗುತ್ತದೆ. ರೈತರಿಗೆ ಯಾವ ಬೆಳೆ ಉತ್ತಮ,ಅದನ್ನು ಯಾವರೀತಿ ಬೆಳೆಯಬೇಕು ಎಂಬುದರ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು, ರೈತ ಪರ ಕಂಪನಿಗಳು, ಜಾಗೃತಿ ಮೂಡಿಸುವ ಮೂಲಕ ಸಲಹೆಗಳು ನೀಡುತ್ತಿರಬೇಕು.
ಇಂದು ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಶಿಕ್ಷಣ, ಪರಿಸರ ಹಬ್ಬ ಮುಖ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕು ಎಂದರು. ನಮ್ಮ ಪರಿಸರ, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಹಾಗೆಯೇ ಪ್ರಾಥಮಿಕ ಹಂತದ ಶಿಕ್ಷಣವನ್ನು ಉತ್ತಮಗೊಳಿಸಬೇಕಾಗಿದೆ,ಈ ಬಗ್ಗೆ ನಾವು ಹೆಚ್ಚು ಆಸಕ್ತಿ ವಹಿಸಿಕೊಳ್ಳಬೇಕಾಗಿದೆ ಎಂದರು.
ಕೋರಮಂಡಲ್ ಕಂಪನಿ ಹೂವಿನಹಳ್ಳಿ ಸರಕಾರಿ ಶಾಲೆ ದತ್ತು ತಗೆದುಕೊಂಡು ಶಾಲಾ ಮಕ್ಕಳಿಗೆ ಶುದ್ದ ಕುಡಿಯುವನೀರಿನ ಘಟಕ ಆರಂಬಿಸಿದ್ದು, ಶ್ಲಾಘನೀಯ ,ಇದೆರೀತಿ ಕಂಪನಿಗಳು ಸರಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದರು.
ಕೋರಮಂಡಲ ಕಂಪನಿಯ ಡಿಜಿಎಂ ಶಿವಪ್ಪಗೌಡ ಪಾಟೀಲ, ಜಿ.ಪಂ. ಮಾಜಿ ಉಪಾಧ್ಯಕ್ಷ ಸಿದ್ದುಗೌಡ ಪಾಟೀಲ, ನಿಂಬೆ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ರೈತ ಸಂಘದ ಮುಖಂಡರಾದ ರಂಜುಣಗಿ, ಡಾ. ಶ್ರೀಶೈಲ ಪಾಟೀಲ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಎನ್.ಎ. ಬಿರಾದಾರ, ಶಿವಲಿಂಗ ಹಳೆಮನಿ, ಇಂಜಿನಿಯರ್ ಶ್ರೀಶೈಲ ಮಠಪತಿ, ಮಲಕನಗೌಡ ಪಾಟೀಲ, ಶಿವಶರಣಪ್ಪಗೌಡ ಬಿರಾದಾರ, ಸಂತೋಷ ಸಿಂದಗಿ, ದರೇಪ್ಪ ಮುದೊಡಗಿ, ಶ್ರವಣಕುಮಾರ ಪಾಟೀಲ, ಯಮನೂರ ಹೇಗ್ಗಾಡ ಬಿರಾದಾರ, ಯಲ್ಲಪ್ಪ ಕಟ್ಟಿಮನಿ, ಶರಣು ಹುವಿನಹಳ್ಳಿ, ವಿಠಲ ಪರಿಠ, ಶಿಕ್ಷಕರಾದ ಶೈಲಾ ಯಡ್ರಾಮಿ, ಎಲ್.ಪಿ. ಪವಾರ, ಎಂ.ಕೆ. ಬಾಗೇವಾಡಿ, ಆರ್.ವಿ. ಕಂಬಾರ ಹಾಗೂ ರೈತರು ಗ್ರಾಮಸ್ಥರು ಪಾಲ್ಗೊಂಡಿದ್ದರು.