ಸಾವತ್‍ಖೇಡದಲ್ಲಿ ಶರಣಬಸವೇಶ್ವರ ಪುರಾಣ

ಕಲಬುರಗಿ : ಫೆ.22:ಜಿಲ್ಲೆಯ ಕಾಳಗಿ ತಾಲೂಕಿನ ಸಾವತ್ ಖೇಡ ಗ್ರಾಮದಲ್ಲಿ ಗ್ರಾಮದ ಅದಿ ದೇವತೆ ಶ್ರೀ ದ್ಯಾವಮ್ಮ ದೇವಿಯ 17 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಕಲಬುರಗಿಯ ಮಹಾಮಹಿಮರಾದ ಶ್ರೀ ಶರಣಬಸವೇಶ್ವರ ಮಹಾಪುರಾಣವು 11 ದಿನಗಳ ಕಾಲ ಗ್ರಾಮದ ಶ್ರೀ ದ್ಯಾವಮ್ಮ ದೇವಿಯ ದೇವಸ್ಥಾನದಲ್ಲಿ ನಡೆಯುತ್ತಿದೆ. ಪುರಾಣ ಪ್ರವಚನಕಾರಾಗಿ ಕಲ್ಯಾಣ ಕರ್ನಾಟಕದ ಹಿರಿಯ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು ವೇ. ಮೂ. ಪಂ. ಸೂರ್ಯಕಾಂತ ಶಾಸ್ತ್ರಿಗಳು ಧುತ್ತರಗಾಂವ ಶರಣಬಸವೇಶ್ವರ ಪುರಾಣವನ್ನು ಪ್ರವಚನ ಮಾಡುತ್ತಿದ್ದಾರೆ. ಇವರಿಗೆ ಸಂಗೀತ ಸಂಯೋಜಕರಾಗಿ ಭೂಸನೂರ ಗ್ರಾಮದ ಹಿರಿಯ ಆಕಾಶವಾಣಿ ಹಾಗೂ ದೂರದರ್ಶನ ಬಿ-ಹೈ ಗ್ರೇಡ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ ಸಂಗೀತ ಸೇವೆ ನೀಡುತ್ತಿದ್ದಾರೆ ತಬಲಾ ಸಾಥಿಗಾರರಾಗಿ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ ಇವರ ಸಹಯೋಗದಲ್ಲಿ 11 ದಿನಗಳವರೆಗೆ ಪುರಾಣ ಕಾರ್ಯಕ್ರಮವು ನಡೆಯುದು. ಪುರಾಣ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ತೊಟ್ಟಿಲು. ಮದುವೆ. ಹಂತಿ. ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆದವು. ಗ್ರಾಮದ ದ್ಯಾವಮ್ಮ ದೇವಿಯ ಭಕ್ತರು ಈ ವರ್ಷದ ಜಾತ್ರಾ ಮಹೋತ್ಸವ ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.