ಸಾಲ ವಸೂಲಾತಿ ಸಿಬ್ಬಂದಿ ಮೇಲೆ ಹಲ್ಲೆ ಸುಳ್ಳು

ಕೋಲಾರ,ಜೂ,೨೩:ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿಗೆ ಬಂದ ಸಿಬ್ಬಂದಿಗಳ ಮೇಲೆ ಮಹಿಳೆಯರು ಹಲ್ಲೆ ಮಾಡಿ ಬೈಕ್‌ಗೆ ಬೆಂಕಿ ಹಚ್ಚಿದರೂ ಎಂಬ ಸುದ್ದಿ ಕಿಡಿಗೇಡಿಗಳು ಹರಡಿರುವಂತ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಯಾವೂದೇ ಸ್ತ್ರೀ ಶಕ್ತಿಗಳು ಯಾವ ಸಿಬ್ಬಂದಿಯ ಮೇಲೆ ಹಲ್ಲೆಯೂ ಮಾಡಿಲ್ಲ, ಬೈಕ್‌ಗೆ ಬೆಂಕಿಯೂ ಹಚ್ಚಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಸ್ವಷ್ಟ ಪಡೆಸಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಗೊಕುಂಟೆ ಸಹಕಾರ ಸಂಘದ ಸಿಬ್ಬಂದಿ ಜೋಸೆಪ್ ಎಂಬುವರು ಸ್ತ್ರೀಶಕ್ತಿ ಸಂಘಗಳಿಗೆ ನೀಡಿದ್ದ ಸಾಲ ವಸೂಲಾತಿಗೆಂದು ಬಿಸ್ನಹಳ್ಳಿ ಗ್ರಾಮದಲ್ಲಿನ ಸಾಲ ಪಡೆದಿರುವ ಸಂಘದ ಸದಸ್ಯರನ್ನು ಭೇಟಿ ಸಾಲದ ಕಂತುಗಳನ್ನು ಪಾವತಿಸಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳು ವಿಧಾನ ಸಭಾ ಚುನಾವಣೆಯ ಪ್ರಚಾರದ ಬಹಿರಂಗ ಸಭೆಗಳಲ್ಲಿ ಆಡಳಿತರೊಢ ಕಾಂಗ್ರೇಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಸ್ರ್ತೀ ಶಕ್ತಿ ಸಂಘಗಳ ಸಾಲವನ್ನು ಮನ್ನ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ನಾವೆಲ್ಲಾ ಕಾಂಗ್ರೇಸ್ ಪಕ್ಷಕ್ಕೆ ಮತ ಚಲಾಯಿಸಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ ಈಗಾ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನ ಮಾಡಲಿದ್ದಾರೆ ಹಾಗಾಗಿ ನಾವು ಸಾಲವನ್ನು ಬ್ಯಾಂಕಿಗೆ ಪಾವತಿಸುವುದಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳ ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ನಮಗೆ ಮುಖ್ಯ ಮಂತ್ರಿಗಳೇ ಸಾಲ ಮನ್ನ ಮಾಡುತ್ತೇವೆ ಎಂದು ಭರವಸೆ ನೀಡಿರುವುದರಿಂದ ನಾವು ಸಾಲವನ್ನು ಪಾವತಿಸುವುದಿಲ್ಲ. ನೀವುಗಳ ಗ್ರಾಮದಿಂದ ಹೊರ ಹೋಗಿ ಎಂದು ತಾಕೀತು ಮಾಡಿದರು. ಆಗಾ ಜೋಸೇಫ್ ಅವರು ನಮಗೆ ಸರ್ಕಾರದಿಂದ ಯಾವೂದೇ ಅಧಿಕೃತ ಅದೇಶ ಜಾರಿ ಮಾಡಿಲ್ಲ. ಜಾರಿ ಮಾಡಿದಲ್ಲಿ ನಾವು ಸಾಲ ವಸೂಲಾತಿಗೆ ಬರುವುದಿಲ್ಲ. ಜಾರಿ ಮಾಡುವವರೆಗೂ ನೀವು ಕಂತುಗಳನ್ನು ಪಾವತಿಸ ಬೇಕೆಂದು ತಿಳಿಸಿದರು,
ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘಗಳಲ್ಲಿಯೇ ಎರಡು ಗುಂಪುಗಳ ನಡುವೆ ವಾಗ್ವಾದ ಹಾಗೂ ತಳ್ಳಾಟ,ನೂಕಾಟಗಳು ನಡೆದು ಘರ್ಷಣೆ ಹಂತಕ್ಕೆ ತಿರುಗಿದಾಗ ಗ್ರಾಮಾಸ್ಥರ ಮಧ್ಯ ಪ್ರವೇಶಿಸಿ ಎಲ್ಲರನ್ನು ಸಮಾಧಾನ ಪಡೆಸಿದ್ದಾರೆ.
ಇದೇ ವೇಳೆ ಗ್ರಾಮದಲ್ಲಿ ಅಕಾಸ್ಮೀಕವಾಗಿ ಬೈಕ್‌ವುಂದರ ಸೀಟಿಗೆ ಬೆಂಕಿ ಬಿದ್ದಿರುವುದನ್ನು ಕಂಡ ಕೆಲವು ಕಿಡಿಗೇಡಿಗಳು ವೀಡಿಯೂ ಮಾಡಿ ಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಲ ವಸೂಲಾತಿಗೆ ತೆರಳಿದ್ದ ಸ್ತ್ರೀ ಶಕ್ತಿ ಸಂಘಗಳು ಬ್ಯಾಂಕಿನ ಸಿಬ್ಬಂದಿ ಬೈಕ್‌ಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

ಇದನ್ನು ನೋಡಿ ಕೆಲವು ಟಿ.ವಿ. ಚಾನೆಲ್‌ನವರು ಸತ್ಯಸತ್ಯತೆಯನ್ನು ಅರಿಯತೆ ಈ ಮಾಹಿತಿಯನ್ನು ಅತುರದಲ್ಲಿ ಪ್ರಸಾರ ಮಾಡಿರುವುದು ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿತ್ತು ಎಂದು ಸ್ವಷ್ಟ ಪಡೆಸಿದ್ದಾರೆ.
ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾದ್ಯಮಗಳಿಗೆ ವಿವರಿಸಿದ್ದಾರೆ.