ಸಾಲ ಮಾಡದೆ ಉಚಿತ ಗ್ಯಾರಂಟಿ ಯೋಜನೆ ಜಾರಿಗೆ ತಂದರೆ ಅಭಿನಂದಿಸುವೆ

ರಾಯಚೂರು,ಜೂ.೧೨-
ರಾಜ್ಯದಲ್ಲಿ ಸಾಲ ಮಾಡದೆ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರವರನ್ನು ಅಭಿನಂದಿಸುವದಾಗಿ ಶಾಸಕ ಬಿಜೆಪಿ ಮುಖಂಡ ಮಾನಪ್ಪ ವಜ್ಜಲ್ ಹೇಳಿದರು.
ಅವರು ಸ್ಥಳೀಯ ಬಸ್ ನಿಲ್ದಾಣದಲ್ಲಿ ಶಕ್ತಿ ಮಹಿಳೆಯರಿಗೆ ಉಚಿತ ಬಸ ಪ್ರಯಾಣಕ್ಕೆ ಚಾಲನೆ ನೀಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮಹಿಳೆಯರು ಉಚಿತ ಯೋಜನೆಗಳ ಸದುಪಯೋಗ ಹೊಂದಬೇಕು ಉಚಿತ ಬಸ ಪ್ರಯಾಣ ಗ್ರಾಮೀಣ ಮಹಿಳೆಯರಿಗೆ ಅನಕೂಲವಾಗಲಿದೆ ಗೃಹ ಲಕ್ಷ್ಮೀ ಯೋಜನೆಯಡಿ ಅತ್ತೆ ಸೋಸೆಯರ ಮಧ್ಯೆ ಜಗಳ ಉಂಟಾಗಬಾರದು ಮನೆಯ ಎಲ್ಲಾ ಮಹಿಳೆಯರಿಗೆ ೨ಸಾವಿರ ರೂ ಸಿಗುವಂತಾಗಬೇಕು.
ಈಗಾಗಲೆ ಸರಕಾರ ವಿದ್ಯುತ ಬಿಲ್ ಎರಿಕೆ ಮಾಡಿರುವದರಿಂದ ರಾಜ್ಯದಲ್ಲಿ ಅಸಮಧಾನ ಆರಂಭವಾಗಿದೆ ಇನ್ನು ಉಚಿತ ಯೋಜನೆಗಳಿಗೆ ಸಾಲ ಮಾಡಿದರೆ ನಾವೆ ಭರಿಸಬೇಕಾಗುತ್ತದೆಂದು ಸರಕಾರದ ಯೋಜನೆಗಳನ್ನು ಟೀಕಿಸಿದರು.
ಇದೆ ಸಮಯದಲ್ಲಿ ಸ್ಥಳೀಯ ಡಿಪೊಕ್ಕೆ ಬಂದ ಐದು ಹೊಸಬಸಗಳಿಗೆ ಹಸೀರು ನಿಶಾನೆ ತೊರಿಸಿ ಶಾಸಕ ವಜ್ಜಲ್ ಚಾಲನೆ ನೀಡಿದರು.
ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಯಾದವ ಮಾತನಾಡಿ ಸರಕಾರದ ಯೋಜನೆಗಳ ಲಾಭ ಪಡೆಯಲು ತಿಳಿಸಿದರು.
ತಹಸೀಲ್ದಾರ ಡಿ.ಎಸ್ ಜಮಾದಾರ, ಸಿಪಿಐ ಸಂಜಿವಕುಮಾರ, ಸಿಡಿಪಿಓ ಗುರುಪ್ರಸಾದ, ಈಶಾನ್ಯ ಸಾರಿಗೆ ಘಟಕ ವ್ಯವಸ್ಥಾಪಕ ರಾಹೂಲ್ ಮನ್ಸೂರೆ, ಉಪತಹಸಿಲ್ದಾರ ಬಸವರಾಜ ಝಳಕಿಮಠ, ಅಬಕಾರಿ ನಿರೀಕ್ಷಕ ಮಹ್ಮದ ಹುಸೇನ, ಭೂ ಮಾಪನ ಇಲಾಖೆಯ ಎಮ್.ಜಿ ಹಿರೇಮಠ, ಎಎಸ್‌ಐ ರತ್ನಾ ಭಾಗವಹಿಸಿದ್ದರು.
ಸಿಬ್ಬಂದಿ ಬಸವರಾಜ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.