ಸಾಲ ಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಔರಾದ್ :ಏ.21: ಸಾಲದ ಬಾಧೆ ತಾಳಲಾರದೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ಅನಿಲಕುಮಾರ ಚನ್ನಬಸಪ್ಪ ಪಾಟೀಲ್ (52) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರ್ದುದೈವಿ. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಸೇರಿದಂತೆ ಅಪಾರ ಬಂದುಗಳನ್ನು ಅಗಲಿದ್ದಾರೆ. ನಾಗಮಾರಪಳ್ಳಿ ಗ್ರಾಮದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 1 ಲಕ್ಷ 3 ಸಾವಿರ 562 ರೂ ಮತ್ತು ಔರಾದನ ಪಿಎಲ್‍ಡಿ ಬ್ಯಾಂಕ್‍ನಲ್ಲಿ 88,183 ರೂ. ಸೇರಿದಂತೆ ಖಾಸಗಿ ಸಾಲ ಕೂಡಾ ಪಡೆದಿದ್ದರು. ಸತತ ಕಳೆದ ಎರಡು ವರ್ಷದಿಂದ ಬೆಳೆಹಾನಿಯಿಂದ ಸಾಕಷ್ಟು ನೊಂದಿದ್ದ ಅನಿಲಕುಮಾರ ಪಾಟೀಲ್ ಸಾಲಬಾಧೆಯಿಂದ ಬೆಳ್ಳಂಬೆಳಗ್ಗೆ ಹೊಲದಲ್ಲಿ ವಿಷ ಸೇವಿಸಿದರು. ಇದನ್ನು ಗಮನಿಸಿದ ಮೃತನ ಸಹೋದರ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಮೃತನ ಸಹೋದರ ಸಂಗಪ್ಪ ಅವರು ನೀಡಿದ ದೂರಿನ ಮೇರೆಗೆ ಔರಾದ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಆಗ್ರಹ : ರೈತ ಅನಿಲಕುಮಾರ ಪಾಟೀಲ್ ಸಾಲದ ಬಾಧೆಯಿಂದ ಮೃತಪಟ್ಟಿದರಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಲುಕಿದೆ. ರೈತನ ಕುಟುಂಬಕ್ಕೆ ಕುಡಲೇ ಸರ್ಕಾರ ಪರಿಹಾರ ನೀಡಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ನೇಹರು ಪಾಟೀಲ್, ಚನ್ನಯ್ಯ ಸ್ವಾಮಿ, ಶಾಮಣ್ಣ ಮೆಂಗಾ, ಸಂಜು ರಡ್ಡಿ ಹೆಗಡೆ, ಕಲ್ಲಪ್ಪ ರೂಪಾ, ಹಣಮಂತ ಚಿಮ್ಮಾ, ಬಂಡೆಪ್ಪ ರೂಪಾ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.