ಸಾಲ ಬಾಧೆ: ರೈತ ನೇಣಿಗೆ ಶರಣು

ಬ್ಯಾಡಗಿ,ಮೇ5: ಸಾಲದ ಬಾಧೆಯನ್ನು ತಾಳಲಾರದೇ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಗ್ರಾಮದ ಸುರೇಶ ಬಸವಣ್ಣೆಪ್ಪ ಎರೇಸೀಮಿ(42) ಎನ್ನಲಾಗಿದೆ. ಮೃತ ರೈತನು ತನ್ನ 5ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ಕೆವಿಜಿ ಬ್ಯಾಂಕಿನಲ್ಲಿ 2ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿದ್ದು ಕೃಷಿಯಲ್ಲಿ ಉಂಟಾದ ನಷ್ಟದಿಂದ ಬ್ಯಾಂಕಿನಲ್ಲಿ ಸಾಲ ತೀರಿಸಲು ಸಾಧ್ಯವಾಗದೇ ನೊಂದುಕೊಂಡು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ರೈತನ ಆತ್ಮಹತ್ಯೆ ಸುದ್ಧಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ ರವಿಕುಮಾರ ಕೊರವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ ಹಾಗೂ ಕೃಷಿ ಅಧಿಕಾರಿಗಳು ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಘಟನೆ ಕುರಿತಂತೆ ಬ್ಯಾಡಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.