ಸಾಲ ಬಾಧೆ ರೈತ ಆತ್ಮಹತ್ಯೆ

ಇಂಡಿ: ಮಾ.17:ತಾಲೂಕಿನ ಬಬಲಾದ ಗ್ರಾಮದಲ್ಲಿ ರೈತನೊರ್ವ ಸಾಲಬಾಧೆ ತಾಳಲಾರದೆ ತೋಟದಲ್ಲಿನ ಮಾವಿನ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಬಬಲಾದ ಗ್ರಾಮದ ಮಾನಿಂಗಪ್ಪ ಲವಗಿ(38) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 65 ಸಾವಿರ, ಇಂಡಿಯಲ್ಲಿರುವ ಎಲ್& ಟಿ ಫೈನಾನ್ಸದಲ್ಲಿ 1 ಲಕ್ಷ, ಧರ್ಮಸ್ಥಳ ಗ್ರಾಮೀಣ ಸ್ವಸಹಾಯ ಸಂಘದಿಂದ 1 ಲಕ್ಷ,ಮೈಕ್ರೊ ಫೈನಾನ್ಸದಲ್ಲಿ 75 ಸಾವಿರ ಸೇರಿ ಒಟ್ಟು 3.40 ಲಕ್ಷ ಸಾಲವನ್ನು ಜಮೀನ ಅಭಿವೃದ್ದಿಗಾಗಿ ತಗೆದುಕೊಂಡಿದ್ದು, ಭೀಕರ ಬರದ ಹಿನ್ನಲೆಯಲ್ಲಿ ಜಮೀನದಲ್ಲಿ ನೀರಿನ ಕೊರತೆಯಿಂದ ಬೆಳೆ ಸರಿಯಾಗಿ ಬಾರದೆ ಇರುವುದರಿಂದ ತಗೆದುಕೊಂಡ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ನೇಣುಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾನೆ. ಈ ಕುರಿತು ಹೊರ್ತಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.