ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ


ಧಾರವಾಡ,ಜೂ.30: ಲೂಸಿ ಸಾಲ್ಡಾನಾ ಜೀವಂತದಂತಕಥೆ.ತಮ್ಮಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು 99 ನೆಯದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದುತಮ್ಮದೇಆದಕೊಡುಗೆಯನ್ನು ನೀಡಿರುವರು.ಇವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ.ಇವರ ವ್ಯಕ್ತಿತ್ವವನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕತೆಯಲ್ಲಜೀವನಕೃತಿಯಿಂದಆರಂಭಗೊಂಡುಇಂದು ಸ್ಪೂರ್ತಿಕಿರಣಕೃತಿಯವರೆಗೆ ಸಂಪಾದಿತ ಕೃತಿಗಳನ್ನು ಹೊರತರುವ ಮೂಲಕ ತಮ್ಮದೇಆದಕೊಡುಗೆಯನ್ನು ನೀಡಿರುವರು”ಎಂದುಧಾರವಾಡ ನಗರಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ತಿಳಿಸಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಲೂಸಿ ಕೆ ಸಾಲ್ಡಾನಾ ದತ್ತಿಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಸಂಪಾಕತ್ವದಲ್ಲಿ ಹೊರತಂದ “ಸ್ಪೂರ್ತಿಕಿರಣ” ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರಮಿಕರತ್ನ ಪ್ರಶಸ್ತಿಯನ್ನು ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘದ ವಿಶ್ರಾಂತಅಧೀಕ್ಷಕನಿಂಗಪ್ಪಕಾಶಪ್ಪನವರ,ಧಾರವಾಡ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಸಂಜೆ ದಿನಪತ್ರಿಕೆಯಮಿಲಿಂದ ಪಿಸೆ,ಧಾರವಾಡಡಾ. ದ.ರಾ.ಬೇಂದ್ರೆರಾಷ್ಟ್ರೀಯ ಸ್ಮಾರಕಟ್ರಸ್ಟ್‍ನ ವ್ಯವಸ್ಥಾಪಕಪ್ರಕಾಶ ಬಾಳಿಕಾಯಿ, ವಾಯುವ್ಯಕರ್ನಾಟಕರಸ್ತೆ ಸಾರಿಗೆ ಸಂಸ್ಥೆ ಧಾರವಾಡ ನಗರದಘಟಕದ ನಿರ್ವಾಹಕನಿಂಗರಾಜಖನ್ನೂರ, ಶಿವಮೊಗ್ಗ ಪಂಚಾಯತಅಭಿವೃದ್ಧಿಅಧಿಕಾರಿಶಿವನಾಯ್ಕ ಕೆ., ಹೆಬ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಖ್ಯಾತಕಲಾವಿದರಾದಸಿದ್ಧಪ್ಪ ಕುಂಬಾರ, ಹೆಬ್ಬಳ್ಳಿ ಸುದ್ದಿ ಸೂರಪ್ಪ, ರೈತಮಲ್ಲಿಕಾರ್ಜುನ ಪ. ಹೂಗಾರ, ಮುನವಳ್ಳಿಯ ಡಿ. ದೇವರಾಜ್‍ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದಎಮ್.ಎ. ತಹಶೀಲ್ದಾರ್ ಹಾಗೂ ನರೇಂದ್ರ ಸಮಾಜ ಸೇವಕರಾದಮಲ್ಲಪ್ಪ ಹೊಸಕೇರಿಅವರಿಗೆಶ್ರಮಿಕರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು..
ಸುಳ್ಳ ಶ್ರೀ ಶಿವಾನಂದ ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ದಾನಪ್ಪಗೌಡರ,ಕಲಘಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಭಜಂತ್ರಿ, ಧಾರವಾಡಉಪನಿರ್ದೇಶಕರಕಚೇರಿಯ ಶಿಕ್ಷಣ ಸಂಯೋಜಕಝಡ್‍ಎಸ್. ಖಂಡೂನಾಯ್ಕ, ಮನಗುಂಡಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಸಾಹಿತಿರಂಗನಾಥ ವಾಲ್ಮೀಕಿ, ಮುನವಳ್ಳಿ ಸರಕಾರಿ ಮಾದರಿಕನ್ನಡಗಂಡು ಮಕ್ಕಳ ಶಾಲೆಯದೈಹಿಕ ಶಿಕ್ಷಕ ಭವಾನಿ ಕೊಂದುನಾಯ್ಕ, ಧಾರವಾಡ ನವಲೂರಛಾವಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಂತೋಷ ಕರಮಳ್ಳವರ, ಹುಬ್ಬಳ್ಳಿ ನವನಗರಕರ್ನಾಟ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಬಸವರಾಜದೇಸೂರ, ಸವದತ್ತಿ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 5ರ ಸಹ ಶಿಕ್ಷಕಿ ಶ್ರೀಮತಿ ಶೋಭಾ ವೀರಭದ್ರಯ್ಯ ಹೊಂಬಳಮಠ, ಮೊರಬ ಎಂ.ಪಿ.ಎಸ್. ದೈಹಿಕ ಶಿಕ್ಷಕ ಎಂ.ಎಸ್. ಮಾದರ,ಧಾರವಾಡಗುಬ್ಬಚ್ಚಿಗೂಡುಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಕ್ಷ್ಮಿಜಾಧವ, ಕೋಳಿವಾಡ ಶ್ರೀಮತಿ ರುದ್ರಮ್ಮರಾ. ಗುಂಜಳ, ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಸವರಾಜ ಅಶೋಕ ಗುದ್ದೀನ, ವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಎನ್.ಜಿ. ಹಿರೇಮಠ, ಬೆಂಗಳೂರು ಜಿ.ಕೆ.ಬಿ.ಎಂ.ಎಸ್. ಮಲ್ಲೇಶ್ವರಂ ಸಹಶಿಕ್ಷಕಿ ಶ್ರೀಮತಿ ಕೆ.ಆರ್. ಶಶಿಕಲಾವತಿ, ಹೆಬ್ಬಳ್ಳಿ ಶ್ರೀ ಸದ್ಗುರು ವಾಸುದೇವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಮುಂಗೋಡಿಹಾಗೂ ಕಿವಡೆಬೈಲ್ ಸ.ಕಿ. ಪ್ರಾಥಮಿಕ ಶಾಲೆಯಶ್ರೀಮತಿ ಶೈಲಾ ಮ.ಈಳಿಗೇರ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾದಧನವಂತ ಹಾಜವ್ವಗೋಳ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಹುಬ್ಬಳ್ಳಿ ಬ್ಯಾಂಕ್ ಬರೋಡದರೀಜನಲ್ ಮ್ಯಾನೇಜರ್ ಶ್ರೀವಡ್ಡೆ ಹರಿ, ಮುಖ್ಯ ಅತಿಥಿಗಳಾಗಿ ದತ್ತಿ ದಾನಿಗಳಾದ ಶ್ರೀಮತಿ ಲೂಸಿ ಕೆ.ಸಾಲ್ಡಾನ,ಸ್ಫೂರ್ತಿಕಿರಣಕೃತಿಯ ಸಂಪಾದಕರಾದವಾಯ್. ಬಿ. ಕಡಕೋಳ,ಧಾರವಾಡಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯಭೀಮಪ್ಪ ಕಾಸಾಯಿ,ರಾಜ್ಯ ಸಂಪನ್ಮೂಲ ಶಿಕ್ಷಕಿ ವಿ.ಎನ್. ಕೀರ್ತಿವತಿ, ಹುಬ್ಬಳ್ಳಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಉಪ್ಪಿನ,ಧಾರವಾಡಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯಎಲ್.ಐ. ಲಕ್ಕಮ್ಮನವರ,ಧಾರವಾಡಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಚಂದ್ರಶೇಖರತಿಗಡಿಹಾಗೂ ಕರ್ನಾಟಕರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಶಹರದಉಪಾಧ್ಯಕ್ಷಶ್ರೀಮತಿ ವೀಣಾ ಹೊಸಮನಿ.ಬಿ.ಜಿ.ವ್ಹಿ.ಎಸ್ ಬೆಂಗಳೂರಿನ ಆರ್.ರಾಮಕೃಷ್ಣಮೊದಲಾದವರುವೇದಿಕೆಯಲ್ಲಿ ಉಪಸ್ಥಿತರಿದ್ದರು.