ಸಾಲೋಟಗಿ ಗತಕಾಲದಲ್ಲಿ ವಿಶ್ವವಿದ್ಯಾಲಯವಾಗಿತ್ತು: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ:ಮಾ.4: ಸಾಲೋಟಗಿ ಗ್ರಾಮ ಶ್ರೀಶಿವಯೋಗೇಶ್ವರನ ಪುಣ್ಯ ಕ್ಷೇತ್ರ ಈ ಹಿಂದೆ ರಾಷ್ಟ್ರ ಕೂಟರ ಕಾಲದಲ್ಲಿ ವಿಶ್ವವಿಧ್ಯಾಲಯವಾಗಿತ್ತು ನಿಮ್ಮ ಗ್ರಾಮ ಗತಕಾಲದ ಇತಿಹಾಸವನ್ನು ಸ್ಮರಿಸುವ ಜ್ಞಾನದ ಅಗ್ರಹಾರವಾಗಿತ್ತು ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಶ್ರೀ ಶಿವಯೋಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪೌಢ ಶಾಲೆ ಸಾಲೋಟಗಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 9,10 ನೇ ತರಗತಿಗಳ ಪ್ರಾರಂಭೋತ್ಸವ ಮತ್ತು 25 ನೇ ವರ್ಷದ ಬೆಳ್ಳಿಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಲೋಟಗಿ ಈ ಹಿಂದೆ ವಿಶ್ವವಿಧ್ಯಾಲಯವಾಗಿತ್ತು ವಿದೇಶಿ ಯಾತ್ರೀಕ ಹೋಯನತ್ಯಾಂಗ್ಸ ಸಾಲೋಟಗಿ ವಿಶ್ವವಿಧ್ಯಾಲದ ಕುರಿತು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ .ಆದ್ದರಿಂದ ಇಂದು ಶ್ರೀಶಿವಯೋಗೇಶ್ವರ ಹೆಸರಿನಿಂದ ಕಟ್ಟಿದ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿ ಒಳ್ಳೇಯ ರಾಷ್ಟ್ರ ಭಕ್ತರನ್ನಾಗಿ ಮಾಡಬೇಕು. ಅಧುನಿಕ ದಿನಗಳಲ್ಲಿ ಶಿಕ್ಷಣಕ್ಕೆ ಮಹತ್ವಸ್ಥಾನವಿದೆ. ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರಷ್ಟೇ ಅಲ್ಲ ಪಾಲಕರು ಕೂಡಾ ಜವಾಬ್ದಾರರು ಆದ್ದರಿಂದ ಪಾಲಕರು ಮಕ್ಕಳ ಕಡೆ ಗಮನಹರಿಸಿ. ಶ್ರೀಶಿವಯೋಗೇಶ್ವರ ಶಿಕ್ಷಣ ಸಂಸ್ಥೆ ಮುಂಬರುವ ದಿನಗಳಲ್ಲಿ ಒಳ್ಳೇಯ ಸಂಸ್ಥೆಯಾಗಿ ಬೆಳೆಯಲಿ ಎಂದರು.
ಮುಖ್ಯ ಗುರುಗಳಾದ ಆರ್.ಬಿ ಹೂಸೂರ ಪ್ರಸ್ತಾವಿಕ ಮಾತನಾಡಿದರು.

ಡಿ.ಎನ್ ಹಿರೇಮಠ ದಿವ್ಯಸಾನಿಧ್ಯವಹಿಸಿದರು,ಸಂಸ್ಥೆಯ ಅಧ್ಯಕ್ಷ ಜೀತಪ್ಪ. ಎಸ್ ಕಲ್ಯಾಣಿ, ವಿಜುಗೌಡ ಪಾಟೀಲ,ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಇಲಿಯಾಸ ಬೋರಾಮಣಿ, ಭೀಮಣ್ಣಾ ಕೌಲಗಿ, ಸಾಹಿತಿ ಗೀತಯೋಗಿ, ಯುವ ಸಾಹಿತಿಯಾದ ಗಂಗಾಧರ ನಾಗಣಿ, ಖಾಜಪ್ಪ ಬೋಳೆಗಾಂವ, ಶಿವಯೋಗಿ ಗಾಣಿಗೇರ, ಮಹಾದೇವ ತಳಬೀಡಿ, ನಾನಾಸಾಬ ಕೋಟನೂರ, ಶಫೀಕ ತಾಂಬೋಳಿ, ಭಿಮರಾಯ ನಾಟೀಕಾರ, ಶಂಕ್ರೇಪ್ಪ ಮಾರ್ಕಪ್ಪನಹಳ್ಳಿ, ಕೃಷ್ಣಾ ಚವ್ಹಾಣ, ಸಂತೋಷ ಪರಶೇನವರ್ ,ಹೂವಣ್ಣಾ ಪೂಜಾರಿ, ಎಮ್ ಎಮ ವಾಲಿ, ಡಿ.ಜಿ ಜೋತಗೊಂಡ, ಜಿ.ವ್ಹಿ ಚವ್ಹಾಣ, ಪಿ.ಎ. ಕೆರೂರ, ಕೆ.ಬಿ ಹೂಸೂರ, ಶ್ರೀಮತಿ ಆರ್.ಆರ್ ಹೂಸೂರ ಸೇರಿದಂತೆ ಅನೇಕ ಗಣ್ಯರು ಇದ್ದರು.

ನಿವೃತ್ತಿ ಹೊಂದಿದ ಶಿಕ್ಷಕರಾದ ಡಿ.ಎನ್ ಹಿರೇಮಠ, ಡಿ.ಎಲ್ ಇಮ್ಮನದ್, ಅಶೋಕ ಕೆರೂರ ಇವರಿಗೆ ಸನ್ಮಾನಿಸಲಾಯಿತು.