ಸಾಲೋಟಗಿಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ

ಇಂಡಿ:ಜು.17: ನಿರುಪಯುಕ್ತ ಗಣ ತ್ಯಾಜ್ಯ ವಸ್ತುಗಳು ಬೇಕಾಬಿಟ್ಟಿಯಾಗಿ ಎಸೆದಿರುವ ಟೈಯರು ಪ್ಲಾಸ್ಟಿಕ್ ವಸ್ತುಗಳಲ್ಲಿ ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳ ತವರಾಗದಂತೆ ನೋಡಿಕೊಳ್ಳಿ ಎಂದು ಡಾ|| ಪ್ರಶಾಂತ ಧೂಮಗೊಂಡ ಎಂದು ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಡೆಂಗೀ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೆಂಗ್ಯೂ ಬರುವ ಲಕ್ಷಣಗಳು ಕಂಡು ಬಂದರೆ ಕಾಯಿಸಿದ ನೀರು ಕುಡಿಯಬೇಕು. ಬಿಸಿ-ಬಿಸಿ ಆಹಾರ ಊಟಮಾಡಬೇಕು. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ತಾಲೂಕಾ ಸರಕಾರಿ ಆಸ್ಪತ್ರೇಗೆ ಬೇಟಿ ನೀಡಿ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಮ್. ಪೂಜಾರಿ ಮಾತನಾಡಿ ಚಿಕನ್ ಗುನ್ಯಾ, ಮಲೇರಿಯಾ ಹಾಗೂ ಡೆಂಗ್ಯೂ ಎಲ್ಲವೂ ಸೊಳ್ಳೆಗಳಿಂದ ಮನುಷ್ಯನಿಗೆ ಹರಡುವುದು. ಇದರಿಂದ ಮಳೆಗಾಲದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛೆತೆಯಿಂದ ಇರಿಸಿ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಅಧಿಕಾರಿ ಎಸ್.ಹೆಚ್. ಆತನೂರ, ಎಸ್.ಬಿ. ಡಾಣೆ, ಪಿ.ಬಿ. ಹ್ಯಾಳಾದ, ಜೆ.ಎಂ. ಕಡಣಿ. ಬಿ.ಕೆ. ಪಾಟೀಲ, ಆರ್.ಎನ್. ನಿಂಬಾಳ, ಕೂಸುರ್, ಜಗದೇವಿ ಮಂದೇವಾಲ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.