
ಪಚಂಡಿ, ಆಗತ, ಬೆಂಕಿಯ ಬಲೆ, ಹ್ಯಾಂಗರ್ , ಭಾರತದ ಪ್ರಜೆಗಳಾದ ನಾವು ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ಮೈಸೂರಿನ ಶಿವಾಜಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಮೈಸೂರು ರಾಜು ನಿರ್ದೇಶನದ, “ಕುಚುಕು” ಚಿತ್ರದಲ್ಲಿ. ಪ್ರಮುಖ ಖಳನಟನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಸಾಹಸ ಸನ್ನಿವೇಶ ಗಮನ ಸೆಳೆದಿದೆ.
ಜೀವ ಅವರ ನಿರ್ದೇಶನದ, ಪವನ್ ತೇಜ – ಅದಿತಿ ಪ್ರಭುದೇವ ನಾಯಕರಾಗಿ ನಟಿಸಿರುವ “ಅಲೆಕ್ಸ” ಚಿತ್ರದಲ್ಲಿ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಚಂದ್ರಲೇಖ 2” ಚಿತ್ರದಲ್ಲೂ ಶಿವಾಜಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಓಂ ಪ್ರಕಾಶ್ ರಾವ್, ಮೈಸೂರು ರಾಜು. ಜೋಮ್ ರವಿ. ಜೀವ. ಡಾಕ್ಟರ್ ಚಮರಂ. ರಂಗಾಯಣ ನಟರಾಜ್ ಸೇರಿ ಹಲವು ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.
ಪರಭಾಷೆಗಳಲ್ಲಿ ಖಳನಟನಾಗಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದರು, ಮೊದಲು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಖಳನಟನಾಗಬೇಕೆಂಬ ಆಸಕ್ತಿ ಎನ್ನುತ್ತಾರೆ ಕನ್ನಡಿಗ ಮೈಸೂರು ಶಿವಾಜಿ.