ಸಾಲು ಸಾಲು ಅವಕಾಶ

ಕರಾವಳಿ ಭಾಗದ ಅನೇಕರು ಚಂದನವನದಲ್ಲಿ ಮೋಡಿ ಮಾಡಿದ್ದಾರೆ.ಆ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆ ಅವರೇ ಕಾಜಲ್ಕುಂದರ್. ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್‌ಕುಮಾರ್ ಅಭಿನಯಿಸುತ್ತಿರುವ “ಪೆಪೆ” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಿಂದಿ ಮತ್ತು ಮರಾಠಿ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ.ಜೊತೆಗೆ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ.
ಧಾರಾವಾಹಿಗಳು, ಜಾಹಿರಾತು ಮತ್ತು ಸಿನಿಮಾದಲ್ಲಿ ನಟಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ತುಳು ಭಾಷೆಯ ‘ಪತ್ತನಾಜೆ’, ‘ದೇಯಿಬೈದತ್ತಿ’ ಹಾಗೂ ಮರಾಠಿಯ ‘ಶುಭಸ್ಯಶೀಘ್ರಂ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂರು ಕಡೆ ಹೆಸರು ಮಾಡಿದ ತರುವಾಯ ಕನ್ನಡದಲ್ಲಿ ಪ್ರತಿಭೆ ಪ್ರದರ್ಶಿಸಲು ‘ಮಾಯಾಕನ್ನಡಿ’ ಚಿತ್ರದ ಮೂಲಕ ಕನ್ನಡ ಸಿನಿಮಾಕ್ಕೆ ಹೆಜ್ಜೆ ಇಟ್ಟು, ತರುವಾಯ ‘ದಿಯಾ’ ಖ್ಯಾತಿ ದೀಕ್ಷಿತ್ಶೆಟ್ಟಿ ಅಭಿನಯದ ‘ಕೆಟಿಎಂ’ ದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.
ಇದರ ನಡುವೆ ವಿನೂತನ ಹೆಸರಿನ ‘ಪೆಪೆ’ಗೆ ಸಹಿ ಹಾಕಿದ್ದಾರೆ.ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗುವ
ನಿರೀಕ್ಷೆಯೂ ಇದೆ. ವಿಭಿನ್ನ ಕಥಾ ಹಂದರವಿರುವ ಚಿತ್ರದಲ್ಲಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ.ಈ ಮೂಲಕ ಕನ್ನಡ ಚಿತ್ರರಂದಲ್ಲಿ ಭರವಸೆ ಮೂಡಿಸಲು ಮುಂದಾಗಿದ್ದಾರೆ.
ಪೆಪೆ ಮತ್ತು ಕೆಟಿಎಂ ಚಿತ್ರಗಳಲ್ಲಿ ಬೇರೆ ಬೇರೆ ತರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹೀಗಾಗಿ ಮುಂದಿನ ದಿನಗಳಲ್ಲಿ ಅಭಿನಯಕ್ಕೆ ಆದ್ಯತೆ ಇರುವ ಮತ್ತು ವಿಭಿನ್ನ ಕಥಾ ಹಂದರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಸಾಲು ಸಾಲು ಅವಕಾಶ
ಮಾಯಾ ಕನ್ನಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರದೇಶಿಸಿದ ಮೋಡಿ ಮಾಡಿರುವ ಕರಾವಳಿ ಬೆಡಗಿ ನಟಿ ಕಾಜಲ್ ಕುಂದರ್ , ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ.
ವಿನಯ್ ರಾಜ್ ಕುಮಾರ್ ಅಭಿನಯದ ಪೆಪೆ, ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಸೇರಿದಂತೆ ಹಲವು ಚಿತ್ರಗಳು ಕೈಯಲ್ಲಿದ್ದು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.