ಸಾಲು ಮರದ ತಿಮ್ಮಕ್ಕನಂತಾಗಿ : ಡಾ. ಕರಿಘೂಳೆಶ್ವರ ಫರತಬಾದ

ಜೇವರ್ಗಿ :ಜೂ.9: ಈ ಭುಮಿಯ ಮೇಲೆ ಪ್ರತಿಯೋಂದು ಜೀವಿಯು ಬದುಕಲು ಗಾಳಿ ಪ್ರಮುಖವಾಗಿದೆ. ಪರಿಶುದ್ದವಾದ ಗಾಳಿಯನ್ನು ಪಡೆಯಲು ನಾವುಗಳು ಸಸಿಗಳನ್ನ ನೆಡಬೇಕು. ನಮ್ಮ ಮುಂದಿನ ಪಿಳಿಗೆಗೆ ಬದುಕಟ್ಟಿಕೊಡಬೇಂಕೆಂದರೆ ಮೊದಲು ನಾವು ಸಾಲುಮರದ ತಿಮ್ಮಕ್ಕನಂತಾಗಬೇಕಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ, ಕರಿಘೂಳೆಶ್ವರ ಫರತಬಾದ ಅಭಿಮತಪಟ್ಟರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಬಿ. ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಐ. ಕ್ಯೂ. ಎ. ಸಿ., ಎನ್ ಎಸ್ ಎಸ್, ರೇಡ್ ಕ್ರಾಸ್, ಇಕೋ ಕ್ಲಬ್ ಹಾಗೂ ರೋವರ್ ಮತ್ತು ರೇಂಜರ್ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ಸಸಿ ನಡುವುದರ ಮುಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನುದ್ದೆಶಿಸಿ ಡಾ. ಕರಿಘೂಳೆಶ್ವರ ಫರತಬಾದ ಮಾತನಾಡಿ ಪ್ರಕೃತಿಯನ್ನ ನಾವುಗಳು ನಾಶ ಮಾಡುತ್ತಿದ್ದೆವೆ. ಪರಿಶುದ್ದವಾದ ಗಾಳಿಯನ್ನ ಮಲಿನ ಮಾಡುವುದರ ಮುಲಕ ಪರಿಸರ ಹಾಳು ಮಾಡುತ್ತಿದ್ದೆವೆ. ನಮ್ಮ ಮುಂದಿನ ಪಿಳಿಗೆಗೆ ನಾವು ಬದು ಕಟ್ಟಿಕೊಡಬೇಕಾದರೆ ಸಸಿಗಳನ್ನ ನೇಡಬೇಕು. ನಮ್ಮ ಭುಮಿಯಮೇಲಿನ ತಾಪಮಾನವನ್ನು ಕಡಿಮೆ ಮಾಡಲು ಸಸಿಗಳನ್ನ ನೆಟ್ಟು ಬೆಳಸಬೇಕು. ನಮ್ಮ ಬದುಕಿಗೆ ಸಾಲು (ಆಲ) ಮರದ ತಿಮ್ಮಕ್ಕನನ್ನ ಪ್ರೆರಣೆಯಾಗಿಸಿಕೊಳ್ಳಬೇಕು. ಪರಿಸರ ರಕ್ಷಣೆಯಿಂದಲೆ ಆರೋಗ್ಯದ ಬದುಕು ಎಂಬುವುದನ್ನ ಮರೆಯಬಾರದು. ಸುಮಾರು 45 ಕಿ. ಮಿ. ವರೆಗು ಗಿಡಗಳನ್ನ ಬೆಳೆಸಿ ಪರಿಸರದ ರಕ್ಷಣೆಯನ್ನ ಮಾಡಿದ್ದಾರೆ. ಅವರಂತೆ ನಾವು ಸಸಿಗಳನ್ನ ನೆಡಬೇಕು, ಜೋತೆಗೆ ಬೆಳಸಬೇಕು ಎಂದರು.

ನಂತರ ಸಿದ್ದು ಗೌಡ ಪಾಟೀಲ್ ಉಪ ವಲಯ ಅರಣ್ಯ ಅಧಿಕಾರಿಗಳು ಜೇವರ್ಗಿ ಮಾತನಾಡಿ ಈ ದಿನದಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿಯಲ್ಲಿ 500 ಗಿಡಗಳನ್ನು ನೆಡಲಾಗುತ್ತಿದೆ ಅಲ್ಲದೆ ‘ಪರಿಸರವನ್ನು ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಆದ್ದರಿಂದ ನಾವು ಪರಿಸರ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಪ.ಮಾನು ಸಾಗರ, ಡಾ. ಖುತೇಜಾ ನಸ್ರೀನ್, ಡಾ. ಲಕ್ಷ್ಮಣ್ ಭೋಸೆ, ಡಾ. ಶರಣಪ್ಪ ಸೈದಾಪುರ್, ಶ್ರೀ ಅಮಿತ್ ಮಾಸಿಮಾಡೆ, ಡಾ. ವಿಷ್ಣುವರ್ಧನ, ಶ್ರೀರಾಮುಲು, ಭಾಗ್ಯಶ್ರೀ ಠಾಕೂರ್, ಡಾ. ಶ್ರೀಧರ್, ಭೀಮಣ್ಣ ಬೆಡಕಪಲ್ಲಿ, ಡಾ. ಬಸವರಾಜ ಬಪ್ಪನ, ಡಾ. ಫರೀಶಾ ಜಬೀನ, ಡಾ.ಗೀತಾ ರಾಣಿ ಉಪಸ್ಥಿತರಿದ್ದರು. ಡಾ. ಖಾಜಾವಲಿ ಈಚನಾಳ ನಿರೂಪಿಸಿದರು, ಡಾ. ಗಿರೀಶ ಸ್ವಾಗತಿಸಿದರು, ಡಾ. ಶರಣಪ್ಪ ಗುಂಡುಗುರ್ತಿ ವಂದಿಸಿದರು.