ಸಾಲಿಮಠಗೆ ಬೀಳ್ಕೊಡುಗೆ

ಬಾಗಲಕೋಟೆ,ಅ.31 : ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಜಿ.ಸಾಲಿಮಠ ಅವರನ್ನು ಗುರುವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಚಾರ್ಯರಾದ ಗಂಗಾಧರ ದಿವಟರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲದಾರರಾದ ಎಂ.ಬಿ.ನಾಗಠಾಣ, ಉಪ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಗುಡೂರ, ವಿಶ್ರಾಂತ ಉಪ ಪ್ರಾಚಾರ್ಯರುಗಳಾದ ಎಸ್.ಬಿ.ವಡ್ಡಿನ, ಬಿ.ಆರ್. ದೇಸಾಯಿ, ಆರ್.ಎಸ್.ಹಿರೇಮಠ ಹಾಗೂ ಬಿ.ಎಂ.ಮಠ, ಎಮ್.ಆರ್.ನಾಗನೂರ, ಶಿಕ್ಷಕರಾದ ಸಂಗಮೇಶ ಸಣ್ಣತಂಗಿ ಹಾಗೂ ಡಿ.ಆಯ್. ನಿಲುಗಲ್ಲ, ಎಸ್.ಎಸ್.ಪಾಟೀಲ, ಎಸ್. ವಾಯ್. ಮನಗೂಳಿ, ಜಲಜಾಕ್ಷಿ ಸಾಲಿಮಠ ಸೇರಿದಂತೆ ತರಬೇತಿ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.