ಸಾಲಿಬೀರನಹಳ್ಳಿ: ಪೌಷ್ಠಿಕ ಆಹಾರ ಮೇಳಕ್ಕೆ ಚಾಲನೆ

ಚಿಂಚೋಳಿ,ಏ.1- ತಾಲೂಕಿನ ಸಾಲಿಬೀರನಹಳ್ಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಪೆÇೀಷಣ ಪಕ್ವಾಡ ವಲಯದಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಮತ್ತು ಅಂಗನವಾಡಿ ಮಟ್ಟದಲ್ಲಿ ಸಾರ್ವಜನಕರಿಗೆ ಪೌಷ್ಠಿಕ ಆಹಾರದ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ ಚಾಲನೆ ನೀಡಿದರು.
ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಡಾ. ಅನೀಲಕುಮಾರ ರಾಠೋಡ. ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಾಲೂಕಿನ ಪ್ರತಿಯೊಂದು ಗ್ರಾಮದ ಜನರು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಎಲ್ಲಾ ಅಂಗನವಾಡಿ ಕಾರ್ಯಕರ್ತರು ಪೆÇೀಷಣ ಪಕ್ವಾಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೀರಿ ಗರ್ಭಿಣಿಯರಿಗೆ ಒಳ್ಳೆಯ ಪೌಷ್ಟಿಕ ಆಹಾರಗಳನ್ನು ನೀಡಬೇಕು ಎಂದರು.
ತಾಲೂಕಿನ ಎಲ್ಲಾ ಅಂಗನವಾಡಿಗಳಲ್ಲಿ ಮಕ್ಕಳಿಗೆ ಒಳ್ಳೆ ಆಹಾರವನ್ನು ನೀಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ. ಚಿಂಚೋಳಿಯ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ. ಮತ್ತು ಸಾಲಿಬೀರನಹಳ್ಳಿ ಪಂಚಾಯತಿಯ ಅಧ್ಯಕ್ಷರಾದ ಗೋಪಾಲ ಚವ್ಹಾಣ. ಗ್ರಾಮ ಪಂಚಾಯತ ಸದಸ್ಯರಾದ ರಾಜಶೇಖರ ದಂಡಿನ. ಚನ್ನಬಸಪ್ಪ. ರಾಜು ಲೇವಡಿ. ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.