ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಸನ್ಮಾನ

ದಾವಣಗೆರೆ.ಜೂ.೧೧; ವಿವಿಧ ಸಂಘಟನೆಗಳ ರೂವಾರಿ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ” ಬಿರುದಾಂಕಿತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಇತ್ತೀಚಿಗೆ  ಜೀವಮಾನ ಸಾಂಸ್ಕೃತಿಕ ಸಾಧನೆಯನ್ನು ಪರಿಗಣಿಸಿ, ಅವರ ಸಾಧನೆಗಳ ಮತ್ತು ಅವರ ಅಭಿಮಾನಿಗಳ ಸಂದರ್ಶನದೊಂದಿಗೆ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಅವರನ್ನು ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.ನಗರದ ಮಹಾಲಕ್ಷ್ಮಿ ಬಡಾವಣೆಯ ಕಾವೇರಿ ಅಪಾರ್ಟ್ಮೆಂಟ್ ಅವರ ಸ್ವಗೃಹದಲ್ಲಿ ನಡೆದ “ನೂರು ಜನ ನೂರು ಧ್ವನಿ” ಶಿರೋನಾಮೆಯ ಸಾಕ್ಷಚಿತ್ರ ಚಿತ್ರೀಕರಣ ಸಂದರ್ಭದಲ್ಲಿ “ಕಾವೇರಿ ಸಾಂಸ್ಕೃತಿಕ ವೇದಿಕೆ”ಯ ಪದಾಧಿಕಾರಿಗಳಾದ ಶ್ರೀಮತಿ ನಿರ್ಮಲಾ ಚಂದ್ರಪ್ಪ, ಶ್ರೀಮತಿ ಸುಜಾತಾ ತಿಪ್ಪೇಸ್ವಾಮಿ, ಶ್ರೀಮತಿ ಸವಿತಾ ಶ್ರೀನಿಧಿ, ಶ್ರೀಮತಿ ಅನಿತಾ ಸುನೀಲ್, ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ ಮತ್ತು ಸಾಕ್ಷಚಿತ್ರ ಚಿತ್ರೀಕರಣ ಮಾಡಿದ ಕ್ಯಾಮರಾಮ್ಯಾನ್ ಹರೀಶ್ ಉಪಸ್ಥಿತರಿದ್ದು ಶೆಣೈಯವರನ್ನು ಅಭಿನಂದಿಸಿದರು.