ಸಾಲಿಗ್ರಾಮ ಗಣೇಶ್ ಶೆಣೈಗೆ “ಕಾವ್ಯಶ್ರೀ” ರಾಜ್ಯ ಪ್ರಶಸ್ತಿ ಪ್ರಧಾನ

ದಾವಣಗೆರೆ-ಫೆ.28; ವಿಜಯನಗರದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಸಂಯುಕ್ತಾಶ್ರಯದಲ್ಲಿ  ವಿಜಯನಗರ ಜಿಲ್ಲೆಯ ಹೇಮ ಕೂಟದ ಶ್ರೀ ಶಿವರಾಮ ಅವಧೂತ ಆಶ್ರಮದ ಸಭಾಂಗಣದಲ್ಲಿ ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಕಾವ್ಯಶ್ರೀ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂದು ರಾಜ್ಯ ಸಂಘಟನೆಯ ಸಂಸ್ಥಾಪಕರಾದ ಮಧುನಾಯ್ಕ ಲಂಬಾಣಿ ತಿಳಿಸಿದರು.ಸಮಾರಂಭದ ವೇದಿಕೆಯಲ್ಲಿ ಹಂಪಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕೆ.ರವೀಂದ್ರನಾಥ್, ವಿಜಯನಗರ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಲ್. ಹಾಲ್ಯನಾಯ್ಕ ಚುಟುಕ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ, ರಾಜ್ಯಾಧ್ಯಕ್ಷರಾದ ಡಿ.ಡಿ.ಮುತಾಲಿಕ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.