ಸಾಲಿಗ್ರಾಮ ಗಣೇಶ್ ಶೆಣೈಗೆ ಕಸಾಪದಿಂದ ಸನ್ಮಾನ

ದಾವಣಗೆರೆ-ಮೇ.22;ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಇತ್ತೀಚಿಗೆ ಕಸಾಪದ ಸಂಸ್ಥಾಪನಾ ದಿನಾಚಣೆ ಅಂಗವಾಗಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ದಾವಣಗೆರೆಯ ವಿವಿಧ ಕನ್ನಡ ಸಂಘಟನೆಗಳ ರೂವಾರಿ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ” ಎಂದೇ ಖ್ಯಾತಿಯ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಕಲೆ, ಯಕ್ಷಗಾನ ಸೇರಿದಂತೆ ಸಾಹಿತ್ಯ, ಸಂಗೀತ, ಸಂಸ್ಕೃತಿ, ಕನ್ನಡ ನಾಡು-ನುಡಿ ಇತಿಹಾಸ ಪರಂಪರೆಯನ್ನು ದಾವಣಗೆರೆಯಲ್ಲಿ ಕಳೆದ ಮೂರವರೆ ದಶಕಗಳಿಂದ ಕಠಿಣ ಪರಿಶ್ರಮದಿಂದ ಕ್ರಿಯಾಶೀಲ ನಿರಂತರ ಚಟುವಟಿಕೆಯನ್ನು ಗುರುತಿಸಿ ಕುವೆಂಪು ಕನ್ನಡ ಭವನದ ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ ತಿಳಿಸಿದ್ದಾರೆ.ಕಸಾಪದ ಮಾಜಿ ಜಿಲ್ಲಾಧ್ಯಕ್ಷರಾದ ಎ.ಆರ್.ಉಜ್ಜನಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾಂಭದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಂ.ಪಿ.ಎA. ಚನ್ನಬಸವಯ್ಯರವರನ್ನು ಸನ್ಮಾನಿಸಲಾಯಿತು. ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜೀ, ಡಾ.ಆನಂದ ಋಗ್ವೇದಿ ಕಸಾಪದ ಗೌರವ ಕೋಶಾಧ್ಯಕ್ಷರಾದ ಕೆ.ರಾಘವೇಂದ್ರ ನಾಯರಿ, ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ, ಜಿ.ಸಿ.ಜಗದೀಶ್ ಕೂಲಂಬಿ, ರುದ್ರಾಕ್ಷಿಬಾಯಿ, ಸತ್ಯಭಾಮ ಮಂಜುನಾಥ್, ಜಿಗಳಿ ಪ್ರಕಾಶ್, ಕೆ.ಎಸ್.ವೀರೇಶ್ ಪ್ರಸಾದ್, ಚಂದ್ರಿಕಾ ಮಂಜುನಾಥ್ ಮುಂತಾದವರು ವೆದಿಕೆಯಲ್ಲಿ ಉಪಸ್ಥಿತರಿದ್ದರು.