ಸಾಲಮರದ ತಿಮ್ಮಕ್ಕನ ಮಾರ್ಗ ಅನುಸರಿಸಿ:ಶಾಸಕ ನಾಡಗೌಡ

ತಾಳಿಕೋಟೆ:ಜೂ.4: ಸಾಲಮರದ ತಿಮ್ಮಕ್ಕ ಎಂಬ ಮಹಿಳೆ ಲಕ್ಷ ಲಕ್ಷಗಟ್ಟಲೇ ಗಿಡಗಳನ್ನು ನೆಡುತ್ತಾ ಅದನ್ನೇ ಕಾಯಕ ರೂಪವನ್ನಾಗಿ ಮುಂದುವರೆದಿದ್ದ ಸಾಲಮರದ ತಿಮ್ಮಕ್ಕನ ಮಾರ್ಗ ಅನುಸರಿಸಿದರೆ ಪರಿಸರ ರಕ್ಷೀಸುವ ಕಾರ್ಯಕ್ಕೆ ಮುಂದಾದಂತಾಗಿ ನಾವು ಎಲ್ಲರೂ ವ್ಯವಸ್ಥಿತವಾಗಿ ಜೀವನ ನಡೆಸಬಹುದಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನುಡಿದರು.

ಶನಿವಾರರಂದು ಸ್ಥಳೀಯ ಆಶ್ರಯ ಬಡಾವಣೆಯಲ್ಲಿ ಹಸಿರು ಸಂಪದ ಬಳಗದ 6ನೇ ವಾರ್ಷಿಕೋತ್ಸವ ಅಂಗವಾಗಿ ಪುರಸಭೆ, ಸಾಮಾಜಿಕ, ಪ್ರಾದೇಶಿಕ, ಹಾಗೂ ಕೆಬಿಜೆಎನ್‍ಎಲ್, ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಪರಿಸರ ರಕ್ಷಕರ ಸನ್ಮಾನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಒಂದು ಹುಲ್ಲಿನ ಕಡ್ಡಿಯೂ ಕೂಡಾ ಸೂರ್ಯ ಚಂದ್ರಗ್ರಹಗಳ ಪರಿಣಾಮ ಸ್ವರೂಪ ಬದಲಾವಣೆಯನ್ನು ಮಾಡಿಕೊಳ್ಳುತ್ತದೆ ಹಾಗೆ ಮನುಷ್ಯನ ಮೇಲೆಯೂ ಪರಿಣಾಮ ವಾಗಿ ವಿವಿಧ ರೋಗಗಳು ಹರಡಲು ಪ್ರಾರಂಭವಾಗುತ್ತವೆ ಎಂದರು. ಬೇಸಿಗೆಯ ಸಮಯದಲ್ಲಿ ಶುದ್ದ ನೀರು ದೊರೆಯಲಾರದಕ್ಕೆ ಅಶುದ್ದ ನೀರನ್ನು ಸೇವಿಸಿದ ಕಾರಣ ಮನುಷ್ಯನ ಮೇಲೆ ಪರಿಣಾಮ ವಾಗುತ್ತದೆ ಕಾರಣ ಸಾಲಮರದ ತಿಮ್ಮಕ್ಕ ಪರಿಸರ ರಕ್ಷಣೆಗಾಗಿ ಅಸಂಖ್ಯಾತ ಗಿಡಗಳನ್ನು ನೆಟ್ಟು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಆಕೆಯ ಸೇವಾ ಕಾರ್ಯ ಮೇಚ್ಚುವಂತಹದ್ದಾಗಿದೆ ಎಂದರು. ಕಾರಣ ನಾವು ನಮ್ಮ ಜವಾಬ್ದಾರಿಯನ್ನು ಅರೀತು ನಡೆಯಬೇಕು ಒಂದು ಗಿಡ ಕಡಿದರೆ ಎರಡು ಗಿಡಗಳನ್ನು ಹಚ್ಚುವಂತಾಗಬೇಕು ಮನುಷ್ಯರಾದ ನಾವು ಮಾಡುವಂತಹ ಕಾರ್ಯಗಳಲ್ಲಿ ಅನಾಹುತಗಳಾಗಬಾರದೆಂದು ಹೇಳಿದ ಶಾಸಕ ನಾಡಗೌಡ ಅವರು ಇಂದು ಪರಿಸರ ರಕ್ಷೀಸುವ ಕಾರ್ಯಕ್ರಮವನ್ನು ನೆರವೇರಿಸಿದಕ್ಕೆ ದನ್ಯವಾದ ಸಲ್ಲಿಸುತ್ತೇನೆಂದು ಹಸಿರು ಸಂಪದ ಬಳಗದ ಕಾರ್ಯ ವೈಖರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇಂತಹ ಸಾರ್ವಜನಿಕ ಸೇವೆಗೆ ಮುಂದಾದ ಸಂಸ್ಥೆಗಳಿಗೆ ಸಹಕಾರ ಬೇಕಾದರೆ ಸಹಕಾರವನ್ನು ಕೊಡಲು ನಾನು ಸದಾ ಸಿದ್ದನಿದ್ದೇನೆ ಇದರಲ್ಲಿ ಎರಡು ಮಾತಿಲ್ಲಾವೆಂದು ಹೇಳಿದ ಶಾಸಕರು ಸುಗಂದ ಬೀರುವ ಗಿಡಗಳನ್ನು ನೆಡುವ ಕಾರ್ಯವಾಗಲಿ ನಂದರಕಿ ಗಿಡಗಳನ್ನು ಹಚ್ಚಿದರೆ ಯಾವಾಗಲು ಹಸಿರು ಇರಲು ಕಾರಣವಾಗುತ್ತದೆ ಕಾರಣ ಗಿಡಮರಗಳನ್ನು ರಕ್ಷೀಸುವ ಕಾರ್ಯವಾಗಬೇಕು ನಿವು ಅವುಗಳನ್ನು ರಕ್ಷೀಸಿದರೆ ಅವುಗಳು ನಿಮ್ಮನ್ನು ರಕ್ಷೀಸುತ್ತದೆ ಎಂದು ಉಪಸ್ಥಿತ ಅಧಿಕಾರಿ ವರ್ಗಕ್ಕೂ ತಿಳಿ ಹೇಳಿದರು.

  ಇನ್ನೋರ್ವ ಎಪಿಜೆ ಅಬ್ದುಲ್ ಕಲಾಂ ಪೌಂಡೇಶನ್‍ದ ಅಧ್ಯಕ್ಷ ರಫೀಕ್ ಇನಾಮದಾರ ಅವರು ಮಾತನಾಡಿ ಜೀವನದಲ್ಲಿ ದೊಡ್ಡ ಕೆಲಸ ಮಾಡುವಂತಹದ್ದೇನಿಲ್ಲಾ ಒಂದು ಗಿಡ ಹಚ್ಚಿದರೆ ಸಾಕು ನಾವು ಮೃತಪಟ್ಟ ನಂತರವು ನಮ್ಮನ್ನು ನೆನೆಸುವ ಕಾರ್ಯ ಮಾಡುತ್ತದೆ ಆ ಗಿಡದ ಕೆಳಗೆ ಕೂಡ್ರುವವರೂ ಕೂಡಾ ಅವರೂ ಕೂಡಾ ಹಚ್ಚಿದವರನ್ನು ನೆನೆಸುತ್ತಾರೆ ತಂದೆ ತಾಯಿ ಅಕ್ಕ ತಂಗಿಯರು ಹೇಗೆ ನಮ್ಮನ್ನು ಪ್ರೀತಿಸುತ್ತಾರೋ ಅಂತಹ ಪ್ರೀತಿಯನ್ನು ನಾವು ಹಚ್ಚಿದ ಗಿಡಮರಗಳು ನೀಡುತ್ತವೆ ಎಂದರು.
  ಇನ್ನೋರ್ವ ಅಧ್ಯಕ್ಷತೆ ವಹಿಸಿದ್ದ ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ ಅವರು ಮಾತನಾಡಿ ಹಸಿರು ಸಂಪದ ಬಳಗ ಪರಿಸರ ರಕ್ಷಣೆ ಮಾಡುತ್ತಾ ಸಾಗಿಬಂದಿದೆ ಅಂತಹ ಸೇವಾ ಕಾರ್ಯಕ್ಕೆ ಆಯಾ ಬಡಾವಣೆಗಳ ನಾಗರಿಕರು ಸಹಕಾರ ನೀಡುವ ಕಾರ್ಯ ಮಾಡಬೇಕು ಇದರಿಂದ ಆಯಾ ಬಡಾವಣೆಗಳಲ್ಲಿ ಗಾರ್ಡನ್ ಗಳನ್ನು ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಇದರಿಂದ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡಲೂ ಸಹ ಅನುಕೂಲವಾಗುತ್ತದೆ ಕಾರಣ ಗಿಡಮರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದರು.

ಇದೇ ಸಮಯದಲ್ಲಿ ಶಾಸಕರಿಗೆ ಹಸಿರು ಸಂಪದ ಬಳಗದ ವತಿಯಿಂದ ಹಾಗೂ ಮುರಾಳ ಪರಿವಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹಸಿರು ಸಂಪದ ಬಳಗದ ಸಂಚಾಲಕ ಎಸ್.ಎಸ್.ಗಡೇದ ಪ್ರಾಸ್ಥಾವಿಕ ಮಾತನಾಡಿದರು.

ಕಾರ್ಯಕ್ರಮದ ಮೊದಲಿಗೆ ಹಸಿರು ಸಂಪದ ಬಳಗದ ದಿ.ಶಫಿಕ್ ಮುರಾಳ ಅವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.

ಈ ಸಮಯದಲ್ಲಿ ಅರಣ್ಯ ಇಲಾಖೆಯ ಬಸ್ಸು ಚೌದ್ರಿ, ಕೆಬಿಜೆಎನ್‍ಎಲ್ ಯಶವಂತ ರಾಠೋಡ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಳಿಕ, ಪ್ರಾದೇಶಿಕ ಅರಣ್ಯ ಅಧಿಕಾರಿ ಬಸನಗೌಡ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಪುರಸಭೆ ಸದಸ್ಯ ಅಕ್ಕಮಹಾದೇವಿ ಕಟ್ಟಿಮನಿ, ಜೈಸಿಂಗ್ ಮೂಲಿಮನಿ, ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಹಾಗೂ ಪ್ರಭುಗೌಡ ಮದರಕಲ್ಲ, ಶ್ರೀಮತಿ ನೀಲಮ್ಮ ಪಾಟೀಲ, ಎಸ್.ಎನ್.ಪಾಟೀಲ, ಎ.ಬಿ.ಇರಾಜ, ಮೊದಲಾದವರು ಉಪಸ್ಥಿತರಿದ್ದರು.

ಸಿಫಿಂಗ್ ಕಾರ್ಪುರೇಶನ್ ಆಫ್ ಇಂಡಿಯಾ ಲಿ, ನಿರ್ದೇಶಕ ಶ್ರೀಕಾಂತ ಪತ್ತಾರ ಅವರು ಸ್ವಾಗತಿಸಿದರು.

ಸಾಹೇಬಗೌಡ ಬಿರಾದಾರ ನಿರೂಪಿಸಿದರು.