ಸಾಲಬಾಧೆ ರೈತ ಆತ್ಮಹತ್ಯೆ

ಭಾಲ್ಕಿ:ಎ.12: ತಾಲೂಕಿನ ತರನಳ್ಳಿ ಗ್ರಾಮದ ರೈತ ಸಂಗಪ್ಪ ಶಿವರಾಯ ಮಳಚಾಪೂರೆ(56) ಎಂಬುವರು ಸಾಲಬಾಧೆ ತಾಳಲಾರದೇ ಮಂಗಳವಾರ ನೇಣಿಗೆ ಶರಣಾಗಿದ್ದಾರೆ. 2.20 ಎಕರೆ ಜಮೀನು ಹೊಂದಿರುವ ರೈತ ಸಂಗಪ್ಪ ಅವರು ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಪಿಕೆಪಿಎಸ್ ಸೇರಿ ವಿವಿಧೆಡೆ ಸುಮಾರು 8-10 ಲಕ್ಷ ರೂ ಸಾಲ ಮಾಡಿದ್ದು, ಸಾಲದ ಹೊರೆ ತೀರಿಸುವ ಚಿಂತೆಯಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಸ್ವಂತ ಹೊಲದಲ್ಲಿ ಗಿಡವೊಂದಕ್ಕೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಮೂವರು ಪುತ್ರಿಯರು, ಪುತ್ರ ಇದ್ದಾನೆ. ಅವರ ಪತ್ನಿ ನಾಗಮ್ಮ ಮಳಚಾಪೂರೆ ನೀಡಿರುವ ದೂರಿನ ಮೇರಗೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.