ಸಾಲಬಾಧೆ ರೈತ ಆತ್ಮಹತ್ಯೆ: ಪರಿಹಾರಕ್ಕೆ ಒತ್ತಾಯ

ಮಾನ್ವಿ,ಜ.೧೦- ತಾಲೂಕಿನ ಗವಿಗಟ್ಟ ಗ್ರಾಮದ ಅಮರೇಶ (೬೨) ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡಿದ್ದ ಬೆಳೆ ನಷ್ಟದಿಂದಾಗಿ ಮರಳಿ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಹಣದ ಅನುಕೂಲ ಆಗದ ಕಾರಣದಿಂದಾಗಿ ಇವರು ಜನವರಿ ೦೨ ರಂದು ಮನನೊಂದು ವಿಷ ಸೇವನೆ ಮಾಡಿಕೊಂಡು ಮೃತಪಟ್ಟಿದ್ದಾರೆ ಆದರೆ ಇಲ್ಲಿಯವರೆಗೆ ತಾಲೂಕ ಆಡಳಿತ ಸೌಜನ್ಯಕ್ಕಾದರೂ ಬೇಟಿ ನೀಡಿಲ್ಲ ಅಥವಾ ಪರಿಹಾರವನ್ನು ಕೂಡ ಘೋಷಣೆ ಮಾಡಿಲ್ಲ ಎಂದು ಮೃತನ ಮಗ ಸುರೇಶ ಗವಿಗಟ್ಟ ಇವರು ಎಎಪಿ ಪಕ್ಷದ ಮಲಕ ತಾಲೂಕ ದಂಡಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಮಾತಾನಾಡಿದ ದಂಡಧಿಕಾರಿ ಕೂಡಲೇ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಆದಷ್ಟು ಕೂಡಲೇ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಎಪಿ ಪಕ್ಷದ ರಾಜಾ ಶ್ಯಾಮಸುಂದರ ನಾಯಕ, ಮೃತನ ಮಗ ಸುರೇಶ ಗವಿಗಟ್ಟ, ಸೇರಿದಂತೆ ಅನೇಕ ರೈತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.