ಸಾಲಬಾಧೆ ಕುರ್ಡಿ ಶಿಕ್ಷಕ ಬಾಲಪ್ಪ ಆತ್ಮ ಹತ್ಯೆ

ಸಿಂಧನೂರು.ನ.೨೧- ಸಾಲ ಬಾಧೆ ತಾಳಲಾರದೆ ಶಿಕ್ಷಕ ನೊರ್ವ ಮನೆಯಲ್ಲಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಂಗಾನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಶಿಕ್ಷಣ ಇಲಾಖೆಯ ಸಿ. ಆರ್.ಸಿ ಯಾಗಿ ಕೆಲಸ ಮಾಡುತ್ತಿದ್ದ ಬಾಲಪ್ಪ ಎನ್ನುವ ಶಿಕ್ಷಕನೆ ಆತ್ಮ ಹತ್ಯೆ ಮಾಡಿಕೊಂಡಿರುವ ನತ ದೃಷ್ಟ ಶಿಕ್ಷಕ ನಾಗಿದ್ದಾನೆ.
ಮೂಲತ ಮುದ್ದೆಬಿಹಾಳ ತಾಲ್ಲೂಕಿನ ಹರೀಂದ್ರ ಹಾಳ ಗ್ರಾಮದವರಾದ ಶಿಕ್ಷಕ ಬಾಲಪ್ಪ ಸಿಂಧನೂರ ಶಿಕ್ಷಣ ಇಲಾಖೆಯಲ್ಲಿ ಸಿ.ಆರ್.ಸಿ ಯಾಗಿ ಬಂಗಾಲಿ ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದು ಸಿಂಧನೂರ ದಿಂದ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮಕ್ಕೆ ವರ್ಗಾವಣೆ ಯಾಗಿ ೬ ತಿಂಗಳಾಗಿದೆ
ಮೃತ ಶಿಕ್ಷಕ ಬಾಲಪ್ಪ ಗಂಗಾ ನಗರದಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದು ಸಾಲ ತೀರಿಸಲಾರದೆ ಇತ್ತಿಚಿಗೆ ಕಟ್ಟಿಸಿದ ಮನೆ ಮಾರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮನೆ ಮಾರಿದರು ಸಾಲ ತಿರಲಿಲ್ಲ ಅಲ್ಲದೆ ೬ ತಿಂಗಳುಗಳಿಂದ ಸಂಬಳ ಸಹ ಬಾರದೆ ಇರುವುದರಿಂದ ಕುಟುಂಬದ ನಿರ್ವವಣೆ ಹಾಗೂ ಸಾಲ ಬಾಧೆ ತಾಳಲಾರದೆ ನಿನ್ನೆ ರಾತ್ರಿ ತನ್ನ ಮನೆಯ ಪ್ಯಾನ್ ಗೆ ನೇಣು ಹಾಕಿಕೊಂಡು ಶಿಕ್ಷಕ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.
ಶಿಕ್ಷಕನ ಮೃತ ದೇಹವನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತಂದಾಗ ಕುಟುಂಬಸ್ಥರ ಆಕ್ರಂದನ ಕಂಡು ಬಂತು ವಿಷಯ ತಿಳಿದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರು ಆಸ್ಪತ್ರೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಶಿಕ್ಷಕ ನಿಗೆ ಪತ್ನಿ ಹಾಗೂ ಎರಡು ಚಿಕ್ಕ ಮಕ್ಕಳಿದ್ದಾರೆ.