ಸಾಲಬಾಧೆಯಿಂದ ನೇಣು ಬೀಗಿದುಕೊಂಡು ರೈತ ಆತ್ಮಹತ್ಯೆ

ಬೀದರ: ನ.23:ಬೀದರ ದಕ್ಷಿಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕುತ್ತಾಬಾದ ಗ್ರಾಮದ 36 ವರ್ಷದ ರೈತ ಸಂಜುಕುಮಾರ ಅವರು ಸುಮಾರು 5 ಲಕ್ಷ ರೂ. ಸಾಲ ತೀರಿಸಲಾಗದೇ ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತಮ್ಮ ಹೊಲದಲ್ಲಿರುವ ಗೀಡಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರೈತ ಸಂಜುಕುಮಾರ ಅವರು ಕುತ್ತಾಬಾದ ಗ್ರಾಮದಲ್ಲಿ 3ವರೆ ಎಕರೆ ನೀರಾವರಿ ಜಮೀನು ಹೊಂದಿದ್ದು, ಹೊಲದಲ್ಲಿ ಕಬ್ಬು ಬೆಳೆ ಬೆಳೆಸಿದ್ದರು. ಸೂಸೈಟಿಯಿಂದ ಸುಮಾರು 2 ಲಕ್ಷ ರೂ. ಮತ್ತು ಕೈಕಡ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದರು. ಅಲ್ಲದೇ ಟ್ರ್ಯಾಕ್ಟರ್ ಸಾಲಕ್ಕಾಗಿ ಬೇರೆಯೊಬ್ಬರು ಸ್ಯೂರಿಟಿ ಸಹ ಕೊಟ್ಟಿದ್ದರು. ಟ್ರ್ಯಾಕ್ಟರ್ ಸಾಲದವರು ಸಂಜಕುಮಾರ ಅವರಿಗೆ ಫೋನಾಯಿಸಿ ಸಾಲದ ಕಂತು ಯಾವಾಗ ಕಟ್ಟುತ್ತಿರಿ ಎಂದು ಫೋನಾಯಿಸಿ ಬೇದಕರಿಕೆ ಹಾಕಿದ್ದರೆನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರೈತ ಸಂಜುಕುಮಾರ ಕುತ್ತಾಬಾದ ಅವರಿಗೆ 5 ಹೆಣ್ಣು, ಒಂದು ಗಂಡು ಮಗುವಿದೆ.

ಈ ಕುರಿತು ಬೀದರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.