ಸಾಲಬಾಧೆಗೆ ತಡೋಳಾದಲ್ಲಿ ರೈತ ಆತ್ಮಹತ್ಯೆ

ಆಳಂದ: ಮೇ.27:ಸಾಲಬಾಧೆಗೆ ತುತ್ತಾದ ರೈತನೋರ್ವನು ಹೊಲದಲ್ಲಿ ಗಿಡಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ತಡೋಳಾ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಗಡಿಗ್ರಾಮ ತಡೋಳಾ ನಿವಾಸಿ ತಾನಾಜಿ ಶಿಂಧೆ (55) ಎಂಬಾತ ರೈತನೇ ನೇಣಿಗೆ ಶರಣಾಗಿದ್ದಾನೆ.
ಮೃತನಿಗೆ 3.7 ಎಕರೆ ಮತ್ತು 4.14 ಎಕರೆ ಪ್ರತ್ಯೇಕ ಜಮೀನು ಹೊಂದಿದ್ದರು 2-3 ವರ್ಷ ಗಳಿಂದ ಹೊಲದಲ್ಲಿ ಸಮರ್ಪಕ ಬೆಳೆ ಬೆಳೆಯದೇ ನಷ್ಟವಾಗಿತ್ತು. ಮೇಲಾಗಿ ಖಜೂರಿ ಗ್ರಾಮದ ಪ್ರಗತಿ ಕೃμÁ್ಣ ಗ್ರಾಮೀಣಬ್ಯಾಂಕ್ ಮತ್ತು ಆಳಂದ ಪಟ್ಟಣದ ಕೃμÁ್ಣ ಭೀಮಾ ಸಮೃದ್ಧಿ ಬ್ಯಾಂಕ್ ನಿಂದ ಮತ್ತು ಸಹಕಾರ ಸಂಘದಲ್ಲಿ ಸಾಲಪಡೆದುಕೊಂಡಿದ್ದರು ಮತ್ತು ಊರಿನವರ ಹತ್ತಿರ ಸಾಲ ಪಡೆದಿದ್ದರು. ಸಾಲವನ್ನು ತೀರಿಸಲು ಸಾಧ್ಯವಾಗದೆ ಮನನೋಂದು ಅಂದು ಬೆಳಿಗಿನ ಸುಮಾರಿಗೆ ಮನೆಯಿಂದ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೊಲದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸಾಲಬಾಧೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದು, ಈ ಕುರಿತು ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.