ಸಾಲದ ಮೇಲಿನ ಬಡ್ಡಿ ದರ ಬದಲಿಲ್ಲ

ಮುಂಬೈ,ಡಿ.೮- ದೇಶದಲ್ಲಿ ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಸತತ ೯ನೇ ಬಾರಿ ಆರ್ ಬಿಐ ಸಾಲದ ಮೇಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಒಮಿಕ್ರಾನ್ ಸೋಂಕು ಆರ್ಥಿಕ ಅನಿಶ್ಚಿತತೆಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರಮುಖ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ.
ಹೀಗಾಗಿ ಸಾಲದ ಮೇಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದುವರೆಗೂ ಇದ್ದ ಪ್ರಮಾಣವನ್ನೇ ಮುಂದುವರಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಶೇಕಡಾ ೪ ರಷ್ಟು ಇದ್ದು ರಿಸರ್ವ್ ರಪೋ ದರ ಶೇಕಡ ೩.೩೫ರಷ್ಟು ಇದೆ. ವಾಣಿಜ್ಯ ಬ್ಯಾಂಕುಗಳಿಗೆ ನೀಡುವದರ ಇದಾಗಿದೆ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಣದುಬ್ಬರ ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯವಾಗಿರುವ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಕೊಳ್ಳುವುದು ಅಗತ್ಯ. ಹೀಗಾಗಿ ಸಾಲದ ಮೇಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
೨೦೨೧ ೨೨ ರ ಆರ್ಥಿಕ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ- ಜಿಡಿಪಿ ಬೆಳವಣಿಗೆಯ ಗುರಿಯನ್ನು ಶೇಕಡಾ ೯.೫ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
೨೦೨೨ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ ೫.೩ ರಷ್ಟು ಇದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಬಡ್ಡಿದರವನ್ನು ಐತಿಹಾಸಿಕ ಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆ ಹೆಚ್ಚಿಸಲು ಕೇಂದ್ರೀಯ ಬ್ಯಾಂಕ್ ಮುಂದಾಗಿದೆ ಎಂದು ಹೇಳಿದ ಅವರು ಕಳೆದ ವರ್ಷ ೨೦೨೦ರ ಮೇ ೨೨ರಂದು ಬಡ್ಡಿದರ ಪರಿಷ್ಕರಣೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಶೇಕಡಾ ೨ರಿಂದ ೪ ರ ಹಾಜುಬಾಜಿನಲ್ಲಿ ಇದೆ. ಎಂದು ಹೇಳಿದ ಅವರು ದೇಶೀಯ ಷೇರುಸೂಚ್ಯಂಕ ಬಿಎಸ್ ಇ ೭೦೦ ಅಂಕಗಳಿಗಿಂತ ಹೆಚ್ಚು ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಭಾರತೀಯ ರಿಸರ್ವ್ ಬ್ಯಾಂಕ್

ಯಥಾಸ್ಥಿತಿ ಮುಂದುವರಿಸಲು ನಿರ್ಧಾರ

ಸ್ವತಃ ೯ನೇ ಬಾರಿಗೆ ಯಾವುದೇ ದರ ಬದಲಾವಣೆ ಮಾಡಿದ ಆರ್‌ಬಿಐ

ದೇಶದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರ ಸೋಂಕು ಒಮಿಕ್ರಾನ್ ಹಿನ್ನೆಲೆಯಲ್ಲಿ ಈ ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಮಿತಿಯಲ್ಲಿ ಪ್ರಮುಖ ನಿರ್ಧಾರ ಪ್ರಕಟ

ಈ ಕುರಿತು ಗೌರ್ನರ್ ಶಕ್ತಿಕಾಂತ್ ದಾಸ್ ಅವರಿಂದ ಮಾಹಿತಿ

ಪ್ರಮುಖ ಹಣಕಾಸು ದರಗಳಲ್ಲಿ ಕೂಡ ಯಥಾಸ್ಥಿತಿ