ಸಾಲದ ಬಾಧೆಯಿಂದ ರೈತ ವಿಠಲ ಆತ್ಮಹತ್ಯೆ

ಬೀದರ್, ನ. 08ಃ ಬೀದರ ಜಿಲ್ಲೆಯ ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬೇಮಳಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಪಾಕಪಳ್ಳಿಯ ಗ್ರಾಮದ ರೈತ ವಿಠಲ್ ಶಿವಪ್ಪ ನಿಂಗನಬಾಡ (41) ಅವರು 1 ಲಕ್ಷ ರೂಪಾಯಿ ಸಾಲದ ಬಾಧೆ ತಾಳಲಾರದೇ ವಿಷ ಸೇವಿಸಿ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚಿಗೆ ನಡೆದಿದೆ.

ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೊಲದಲ್ಲಿ ಬಿತ್ತನೆ ಮಾಡಲು ಉಡಮನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನಿಂದ 1 ಲಕ್ಷ ರೂಪಾಯಿ ಸಾಲ ಪಡೆದ ವಿಠಲ ಶಿವಪ್ಪ ನಿಂಗನಬಾಡ ಅವರು ಅತಿವೃಷ್ಠಿಯಿಂದ ಬೆಳೆ ಬೆಳೆಯದ ಕಾರಣ ಸಾಲ ತೀರಿಸಲು ಆಗದೇ ಮನನೊಂದು ಅಕ್ಟೋಬರ್ 31 ರಂದು ಬೆಳಗ್ಗೆ ಎಂದಿನಂತೆ ಹೋಲಕ್ಕೆ ಹೋದ ಅವರು ವಿಷ ಸೇವಿಸಿದ್ದಾರೆ.

ಅಣ್ಣ ಯಾಕೋ ಮನೆಗೆ ಬಂದಿಲ್ಲವೆಂದು ತಮ್ಮ ಬಸವರಾಜ ಮತ್ತು ಮೃತ್ಯ ರೈತರ ಮಗ ಹೊಲಕ್ಕೆ ಹೋಗಿ ನೋಡಿದಾಗ ರೈತ ವಿಠಲ ಅವರು ವಿಷ ಕುಡಿದು ಒದ್ದಾಡುತ್ತಿರುವುದನ್ನು ಕಂಡು ಕೂಡಲೇ ಮನ್ನಾಏಖೇಳ್ಳಿ ಸಮುದಾಯ ಆಸ್ಪತ್ರೆಗೆ ಸೇರಿಸಿದಾಗ, ಅಲ್ಲಿಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಯ್ಯಲು ಹೇಳಿದರು. ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ರೈತ ವಿಠಲ ಶಿವಪ್ಪ ನಿಂಗನಬಾಡ (41) ಅವರು ದಾರಿ ಮಧ್ಯೆದಲ್ಲಿ ಮೃತ್ಯಪಟ್ಟಿದ್ದಾರೆ ಎಂದು ಮೃತ್ಯ ರೈತನ ಪತ್ನಿ ಶ್ರೀದೇವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.