ಸಾಲದ ಚೆಕ್ ವಿತರಣೆ

ಹುಬ್ಬಳ್ಳಿ,ಜ18: ಮಹಿಳೆಯರಿಗೆ ಸುಲಲಿತವಾಗಿ ಸಾಲ ದೊರೆಯುವ ಉದ್ದೇಶದಿಂದ ನಮ್ಮ ಸಂಘವು ಮಹಿಳಾ ಸಬಲೀಕರಣದ ಆರ್ಥಿಕ ಸಹಾಯದ ಆಂದೋಲನ ಮಾಡುತ್ತಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ಕೊಟಗಿ ಹೇಳಿದರು.
ಶ್ರೀ ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರಿ ಸಂಘದ ಹುಬ್ಬಳ್ಳಿ ಶಾಖೆ ವತಿಯಿಂದ ಸ್ಪಂದನ ಸ್ತ್ರೀ ಗುಂಪು ಹಾಗೂ ಅಮೃತ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‍ಗಳನ್ನು ವಿತರಿಸಿ ಮಾತನಾಡಿದರು.
23 ವರ್ಷಗಳಿಂದ ಪ್ರಿಯದರ್ಶಿನಿ ವಿವಿದ್ದೋದ್ದೇಶಗಳ
ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದ್ದು ಹುಬ್ಬಳ್ಳಿ ಶಾಖೆ ವತಿಯಿಂದ ಸ್ತ್ರೀ ಗುಂಪುಗಳಿಗೆ ಸ್ವ ಸಹಾಯ ಸಂಘಗಳಿಗೆ ನಾವಿಂದು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ವಿತರಣೆ ಮಾಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಕಾಲದಲ್ಲಿ ಸಾಲ ತಿರುವಳಿಯೊಂದಿಗೆ ತೆಗೆದುಕೊಂಡ ಸಂಸ್ಥೆಯ ಋಣ ತೀರಿಸಿದಲ್ಲಿ ಗ್ರಾಹಕರಿಗೆ ಆರ್ಥಿಕ ರಂಗದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಸಹಕಾರಿ ತಜ್ಞ ಸಿ. ಜಿ. ಝಳಕಿ ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಪ್ರವೀಣ್ ಕೊಟಗಿ, ಸಿಬ್ಬಂದಿ ಗಳಾದ ಶಿವಲಿಂಗಪ್ಪ, ಸುಷ್ಮಾ, ನಿರ್ಮಲಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.