ಸಾಲದ ಕಿರುಕುಳ ಜೀನೂರು ಗ್ರಾಮದ ರೈತ ಆತ್ಮಹತ್ಯೆ

ಮಾನ್ವಿ,ಏ.೦೩- ತಾಲೂಕಿನ ಜೀನೂರು ಗ್ರಾಮದ ಸಿದ್ದರಾಮೇಶ ತಂದೆ ದ್ಯಾವಪ್ಪ ಸಾ ಜೀನೂರು ( ೩೦ ) ಇವರ ತಂದೆಯ ಹೆಸರಿನಲ್ಲಿ ಇರುವ ಎಂಟು ಎಕರೆಗೆ ಸಂಬಂಧಿಸಿದಂತೆ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಪಡೆದ ಸಾಲ ಈಗ ೨೫ ಲಕ್ಷಕ್ಕೂ ಅಧಿಕವಾಗಿರುವ ಕಾರಣ ಮನೆಯ ಜವಾಬ್ದಾರಿಯೊತ್ತ ಮಗನು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಜೀನೂರು ವ್ಯಾಪ್ತಿಯ ಸರ್ವೆ ನಂಬರ್ ೩೭ ರಲ್ಲಿರುವ ೮/೩೦ ಎಕರೆ ಹೊಲದ ಬೆಳೆಗಾಗಿ ಮೃತನ ತಂದೆ ಹತ್ತಿರದ ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದನು ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಅಡಚಣೆಯಿಂದಾಗಿ ಬೆಳೆ ಇಳುವರಿ ಕಡಿಮೆಯಾದ ಪರಿಣಾಮವಾಗಿ ದ್ಯಾವಪ್ಪ ಹಾಗೂ ಕುಟುಂಬ ಬೆಂಗಳೂರು ಸಿಟಿಯಲ್ಲಿ ದುಡಿಯುವುದಕ್ಕೆ ತೆರಳಿದ್ದು ಕಿರಿಯ ಮಗನಾಗಿದ್ದ ಸಿದ್ದರಾಮೇಶ ಹೊಲವನ್ನು ನೋಡಿಕೊಂಡು ಹೋಗುತ್ತಿದ್ದ ಆದರೆ ಬ್ಯಾಂಕಿನವರು ಮನೆಗೆ ಬಂದು ಸಾಲವನ್ನು ಮರುಪಾವತಿಸಲು ನೋಟಿಸ್ ನೀಡಿದ ಕಾರಣದಿಂದಾಗಿ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು..