ಸಾಲದ ಕಂತು ಮುಂದೂಡಲು ಮನವಿ

ಹುಬ್ಬಳ್ಳಿ, ಮೇ 3 : ಲಾಕ್‍ಡೌನ್ ಮುಗಿಯುವವರೆಗೆ ಸಂಘ ಸಂಸ್ಥೆಗಳಿಂದ ಪಡೆದ ಸಾಲದ ಕಂತನ್ನು ಮುಂದೂಡುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಆಗ್ರಹಿಸಲಾಯಿತು.
ಕೊರೊನಾ ಲಾಕ್‍ಡೌನದಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬಡಜನರು ಕೆಲ ಮೈಕ್ರೋ ಪೈನಾನ್ಸ್, ಸ್ತ್ರೀ ಶಕ್ತಿ ಗುಂಪುಗಳ ಹಾಗೂ ಕೆಲ ಸಂಘ ಸಂಸ್ಥೆಗಳಿಂದ ಸಾಲವನ್ನು ಪಡೆದಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಸಾಲದ ಕಂತನ್ನು ಪಾವತಿಸಲು ಆಗುತ್ತಿಲ್ಲ. ಆದರೆ ಕೆಲ ಸಂಸ್ಥೆಗಳಿಂದ ಬಡವರಿಗೆ ಕಿರುಕುಳವಾಗುತ್ತಿದ್ದು ಸಂಕಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮುಗಿಯುವವರೆಗೆ ಕಂತನ್ನು ಸ್ವೀಕರಿಸುವುದನ್ನು ಮುಂದೂಡಬೇಕೆಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಇಮ್ರಾನ್ ಯಲಿಗಾರ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಸ್ವಾತಿ ಮಾಳಗಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ದೇಸಾಯಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ ಶಲವಡಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ ಶಿಂಧೆ, ಪುಷ್ಪರಾಜ ಹಳ್ಳಿ, ಶಿವು ಗೋಕಾವಿ, ಸೂರಜ ಗವಳಿ, ಮೆಹಬೂಬ್ ಕಿತ್ತೂರ, ಪರಶುರಾಮ ಸುಣಗಾರ, ಸೌರಭ್ ಮಾಸೆಕರ, ದಾವಲ್ ಬಿಜಾಪುರ, ರತ್ನಾ ತೆಗೂರಮಠ, ಜಗದೇವಿ ಚಿಂಚೊಳ್ಳಿ ಹಾಗೂ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.