ಸಾಲದ ಕಂತುಗಳನ್ನು ಮುಂದೂಡಲು ಆಗ್ರಹಿಸಿ ಪ್ರತಿಭಟನೆ

ಮೈಸೂರು:ಏ:03:ಬ್ಯಾಂಕ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಾಲದ ಕಂತುಗಳನ್ನು ಮುಂ ದೂಡುವಂತೆ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ನೇತೃತ್ವ ದಲ್ಲಿ ಸಾಲದ ಕಂತುಗಳನ್ನು ಮುಂದೂಡಿ ಎಂಬ ನಾಮಫಲಕ ಹಿಡಿದು ಟಿ ಕೆ ಲೇಔಟ್ ನಲ್ಲಿ ಕೃಷ್ಣರಾಜ ಯುವ ಬಳಗ ವತಿಯಿಂದ ಪ್ರತಿಭ ಟಿಸಲಾಯಿತು.
ನಂತರ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ಮಹಾಮಾರಿ ಕೂರೂನಾ 2ನೇ ಅಲೆ ಇಡೀ ದೇಶವನ್ನು ಕಾಡುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಮೇ 14ರವರಿಗೆ ಕರ್ನಾಟಕ ಸರ್ಕಾರ ಜನತಾ ಕಫ್ರ್ಯೂ ಲಾಕ್ ಡೌನ್ ಜಾರಿಗೆ ತಂದಿರುವುದ.ಈ ಸಮಯದಲ್ಲಿ ಬ್ಯಾಂಕ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮೂಲಕ ಸಾಲ ಪಡೆದವರ ಸಾಲದ ಕಂತನ್ನು ಕಟ್ಟಲು ತೊಂದರೆಯಾಗುವುದರಿಂದ ಸಾಲದ ಕಂತುಗಳನ್ನು ಮುಂದೂಡಬೇಕೆಂದು ಆಗ್ರಹಿಸಿದ್ದಾರೆ .
ಸರ್ಕಾರಿ ಸ್ವಾಮ್ಯದ ನೌಕರರನ್ನು ಹೊರತುಪಡಿಸಿ ಇನ್ನೆಲ್ಲಾ ಖಾಸಗಿ ನೌಕರರು, ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ರೈತರ ಜೀವನ ಈಗಾಗಲೇ ಮೊದಲ ಕೂರೂನಾ ಅಲೆಯ ಲಾಕ್ ಡೌನ್ ನಿಂದ ದುಸ್ತರ ಸ್ಥಿತಿ ತಲುಪಿದೆ,ಇನ್ನೇನು ಚೇತರಿ ಸಿಕೊಳ್ಳಲು ತ್ತಿರಬೇಕಾದರೆ ಎರಡನೇ ಅಲೆಯ ಲಾಕ್ ಡೌನ್ /ಜನತಾ ಕಫ್ರ್ಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ .ಇಂತಹ ಸಂದರ್ಭದಲ್ಲಿ ಈ ಎಲ್ಲ ವರ್ಗದ ಜನರು ಬ್ಯಾಂಕ್ ಗಳಲ್ಲಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಮಾಡಿದ ಸಾಲಗಳ ಕಂತುಗಳನ್ನು ಪಾವತಿಸಲು ದೂರವಾಣಿ ಮೂಲಕ ಒತ್ತಾಯಿಸುತ್ತಿದ್ದಾರೆ .ಇದು ಉಸಿರಾಡುತ್ತಿರುವ ವ್ಯಕ್ತಿಯ ಕುತ್ತಿಗೆ ಹಿಚುಕುವ0ತ ವಾತಾವರಣವನ್ನು ನಿರ್ಮಾಣ ಮಾಡಿದಂತಾಗಿದೆ .
ಆದ್ದರಿಂದ ಲಾಕ್ ಡೌನ್/ಜನತಾ ಕಫ್ರ್ಯೂ ಮುಗಿದು ಜನಜೀವನ ಸಹಜ ಸ್ಥಿತಿಗೆ ಮರಳುವವರೆಗೆ ಅಂದರೆ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿ ಒಂದು ತಿಂಗಳ ನಂತರ ಸಾಲದ ಕಂತುಗಳನ್ನು ಪಾವತಿ ಮಾಡಲು ಅವಕಾಶ ಕಲ್ಪಿಸುವಂತೆ ಎಲ್ಲಾ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚಿಸಿ ಜನರ ಆತಂಕ ದೂರ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಜೇಶ್, ಪೈಲ್ವಾನ್ ಸುನೀಲ್, ಪವನ್ ಸಿದ್ಧರಾಮ ,ಶಿವರಾಜು, ಶ್ರೀನಿವಾಸ್ ,ಆನಂದ್, ಪವನ್ ಇತರರಿದ್ದರು.